ವಿಧಾನ ಪರಿಷತ್ ಸದಸ್ಯರಾಗಿ ಡಿಸಿಎಂ ಲಕ್ಷ್ಮಣ್ ಸವದಿ ಆಯ್ಕೆ…

ಬೆಂಗಳೂರು,ಫೆ,17,2020(www.justkannada.in):  ವಿಧಾನ ಪರಿಷತ್ ಸದಸ್ಯರಾಗಿ ಡಿಸಿಎಂ ಲಕ್ಷ್ಮಣ್ ಸವದಿ ಆಯ್ಕೆಯಾಗಿದ್ದಾರೆ.

ಇಂದು ನಡೆದ ವಿಧಾನ ಪರಿಷತ್ ನ ಒಂದು ಸ್ಥಾನ ಚುನಾವಣೆಯಲ್ಲಿ 113 ಮತಗಳನ್ನ ಪಡೆದು ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿ ಗೆಲುವು ಸಾಧಿಸಿದ್ದಾರೆ.  ಚುನಾವಣೆಯಲ್ಲಿ 120 ಮತಗಳು ಚಲಾವಣೆಯಾಗಿದ್ದು ಈ ಪೈಕಿ 7 ಮತಗಳು ಅಸಿಂಧುವಾಗಿವೆ.

ರಿಜ್ವಾನ್ ಅರ್ಷಾದ್ ರಿಂದ ತೆರವಾಗಿದ್ದ ವಿಧಾನಪರಿಷತ್ ಸ್ಥಾನಕ್ಕೆ ಲಕ್ಷ್ಮಣ್ ಸವದಿ ಆಯ್ಕೆಯಾಗಿದ್ದಾರೆ. ಶಿವಾಜಿನಗರ ಉಪಚುನಾವಣೆಯಲ್ಲಿ  ರಿಜ್ವಾನ್ ಅರ್ಷಾದ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಿಜ್ವಾನ್ ಅರ್ಷಾದ್ ರಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.

ಇಂದಿನ ಚುನಾವಣೆಯಲ್ಲಿ ಬಿಜೆಪಿಯ ಬಹುತೇಕರು ಭಾಗವಹಿಸಿ ಮತವನ್ನು ಚಲಾಯಿಸಿದ್ರು. ಆದ್ರೇ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸದೇ ಇದ್ದಕಾರಣ ಮತದಾನದಿಂದ ಹಿಂದೆ ಸರಿದಿತ್ತು. ಹೀಗಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪ್ರಚಂಡ ಗೆಲುವನ್ನು ಸಾಧಿಸಿದ್ದಾರೆ.

Key words:  DCM -Laxman Sawadi – elect- member –  Legislative Council.