ಅಸೂಯೆಗೂ ಹೊಟ್ಟೆಕಿಚ್ಚಿಗೂ ಮದ್ದಿಲ್ಲ- ಹೆಚ್.ಡಿಕೆಗೆ ಡಿಕೆ ಶಿವಕುಮಾರ್ ಟಾಂಗ್.

ಬೆಂಗಳೂರು,ಮೇ,21,2024 (www.justkannada.in):  ರಾಜೀನಾಮೆ ನೀಡುವಂತೆ ಆಗ್ರಹಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಅಸೂಯೆಗೂ ಹೊಟ್ಟೆಕಿಚ್ಚಿಗೂ ಮದ್ದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ನಿಂದ 136 ಜನ ಗೆದ್ದಿದ್ದಾರೆ. ಆದರೆ ಅವರ ಅಧ್ಯಕ್ಷತೆಯಲ್ಲಿ 19 ಸ್ಥಾನ ಬಂದಿವೆ ಪಾಪ ಈಗ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅಸೂಯೆಗೂ ಮದ್ದಿಲ್ಲ ಹೊಟ್ಟೆ ಕಿಚ್ಚಿಗೂ ಮದ್ದಿಲ್ಲ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಏನು ಬೇಕಾದರೂ ಮಾತನಾಡಿಕೊಳ್ಳಲಿ.  ನಾನು ರಾಜೀನಾಮೆ ಕೊಡಬೇಕು ಎಂದು ಅವನ ಆಸೆ . ಆ ತರ ಆಸೆ ಪಡೋದು ತಪ್ಪು ಅನ್ನೋಕೆ ಆಗುತ್ತಾ..?  ಪಾಪ ಅವನ ಆಸೆ ಅದು  ಎಂದು ಏಕವಚನದಲ್ಲೇ ಡಿ.ಕೆ ಶಿವಕುಮಾರ್ ತಿರುಗೇಟು ಕೊಟ್ಟರು.

Key words: DCM, DK Shivakumar, HDK