Saturday, August 22, 2026

BDA Apartments

Home Front Page ಎಟಿಎಂ ಸರ್ಕಾರ ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದ ಬಿಜೆಪಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು.

ಎಟಿಎಂ ಸರ್ಕಾರ ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದ ಬಿಜೆಪಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು.

ಬೆಂಗಳೂರು,ಅಕ್ಟೋಬರ್, 20,2023(www.justkannada.in): ಎಟಿಎಂ ಸರ್ಕಾರ, ಭ‍್ರಷ್ಟಾಚಾರದ ದರ್ಬಾರ್ ಎಂದು ಪೋಸ್ಟರ್ ರಿಲೀಸ್  ಮಾಡಿದ್ದ ಬಿಜೆಪಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್,  ಎಲ್ಲಾ ಎಟಿಎಂ ಅವರದ್ದೇ. ಜನ ತೀರ್ಪು ಕೊಟ್ಟಿದ್ದಾರೆ, ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ರಾಜ್ಯದ ಜನತೆ ಬಿಜೆಪಿ ತಿರಸ್ಕರಿಸಿದ್ದಾರೆ. ಬಿಜೆಪಿ ಮುಖಂಡರು, ನಾಯಕರು ಕಾಂಗ್ರೆಸ್​ ಪಕ್ಷಕ್ಕೆ ಸೇರುತ್ತಿದ್ದಾರೆ. ಹಾಗಾಗಿ ಬಿಜೆಪಿಯವರು ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

Key words: DCM -DK Shivakumar – BJP – released -poster – ATM government.