ಡಿ.14 ರಂದು ಮತ್ತೆ ದೆಹಲಿಗೆ: ಪ್ರತಿ ಜಿಲ್ಲೆಯಿಂದ 300 ಕಾರ್ಯಕರ್ತರನ್ನ ಕರೆದೊಯ್ಯುತ್ತೇವೆ-ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಡಿಸೆಂಬರ್,4,2025 (www.justkannada.in):  ಖಾಸಗಿ ಕಾರ್ಯಕ್ರಮ ನಿಮಿತ್ತ ದೆಹಲಿಗೆ ಹೋಗಿದ್ದೆ. ಇದೀಗ ಮತ್ತೆ ಡಿಸೆಂಬರ್ 14 ರಂದು ದೆಹಲಿಗೆ ಹೋಗುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆದ ಡಿಸಿಎಂ ಡಿಕೆ ಶಿವಕುಮಾರ್ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.  ಖಾಸಗಿ ಕಾರ್ಯಕ್ರಮ ನಿಮಿತ್ತ ದೆಹಲಿಗೆ ಹೋಗಿದ್ದೆ. ಡಿಸೆಂಬರ್ 14 ರಂದು ಮತ್ತೆ ದೆಹಲಿಗೆ ಹೋಗುತ್ತೇನೆ.  ಮತಗಳ್ಳತನ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಪ್ರತಿಭಟನೆಗೆ ಸಿದ್ದತೆಗಳ ಬಗ್ಗೆ ನಾಯಕರೊಂದಿಗೆ ಚರ್ಚೆ ಮಾಡಲಾಗಿದೆ.  ಕೆಪಿಸಿಸಿ ಕಾರ್ಯಾಧ್ಯಕ್ಷ,  ಎಐಸಿಸಿ ಕಾರ್ಯದರ್ಶಿಯೊಂದಿಗೆ ಚರ್ಚೆಯಾಗಿದೆ ಎಂದರು.

ಮತಗಳ್ಳತನ ವಿರುದ್ದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಹೆಚ್ಚಿನ ಸಂಖ್ಯೆಯ ಜನರ ಜೊತೆ ದೆಹಲಿಗೆ ತೆರಳುತ್ತೇನೆ.  ಪ್ರತಿ ಜಿಲ್ಲೆಯಿಂದ 300 ಕಾರ್ಯಕರ್ತರನ್ನ ದೆಹಲಿಗೆ ಕರೆದೊಯ್ಯುತ್ತೇವೆ  ಜನರನ್ನ ಕರೆತರುವುದು ಜಿಲ್ಲಾ ಮಂತ್ರಿಗಳ ಹೊಣೆಯಾಗಿದೆ.  ಕಾರ್ಯಕರ್ತರನ್ನ ಕರೆದೊಯ್ಯಲು ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: Delhi, December 14, DCM,  DK Shivakumar