ದೆಹಲಿ ಕಾಂಗ್ರೆಸ್ ಕಛೇರಿ ನಮಗೆ ದೇವಸ್ಥಾನ ಇದ್ದಂತೆ: ವರಿಷ್ಠರು ಕರೆದ್ರೆ ಹೋಗ್ತೇವೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ನವೆಂಬರ್,28,2025 (www.justkannada.in):  ದೆಹಲಿ ಕಾಂಗ್ರೆಸ್ ಕಛೇರಿ ನಮಗೆ ದೇವಸ್ಥಾನ ಇದ್ದಂತೆ. ಪಕ್ಷದ ವರಿಷ್ಠರು ಕರೆದರೆ ನಾನು ಸಿದ್ದರಾಮಯ್ಯ ಹೋಗುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಪಕ್ಷದ ವರಿಷ್ಠರು ಕರೆದರೆ ನಾನು ಸಿದ್ದರಾಮಯ್ಯ ಇಬ್ಬರು ಹೋಗುತ್ತೇವೆ. ದೆಹಲಿ, ಪಕ್ಷ ನಮಗೆ ದೇವಸ್ಥಾನ ಇದ್ದಂತೆ ಎಂದರು.

ತಮ್ಮ ಪರ ನಿರ್ಮಲಾನಂದನಾಥ ಸ್ವಾಮೀಜಿ ಬ್ಯಾಟಿಂಗ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ನನಗೆ ಯಾವುದೇ ಸಮುದಾಯದ ವ್ಯಾಖ್ಯಾನ ಬೇಕಿಲ್ಲ. ನನ್ನ ಸಮುದಾಯ ಕಾಂಗ್ರೆಸ್ ಒಂದು ಸಮುಯದಾಯ ನನ್ನ ಪರ ಇರೋದು ಅದು ಬೇರೆ . ನಾನು ಎಲ್ಲಾ ಸಮುದಾಯವನ್ನ ಪ್ರೀತಿಸುತ್ತೇನೆ. ಒಬಿಸಿ, ಎಸ್ ಸಿ, ಎಸ್ ಟಿ, ಅಲ್ಪಸಂಖ್ಯಾತರು ಜೊತೆಗಿದ್ದಾರೆ. ಹೌದು ನಾನು ಒಕ್ಕಲಿಗ ಸಮುದಾಯದವನು.  ಕಾಂಗ್ರೆಸ್ ನಲ್ಲಿ ಎಲ್ಲಾ ಸಮುದಾಯದವರು ಇದ್ದಾರೆ ಎಂದರು.

Key words: Delhi, temple, High Command, DCM, DK Shivakumar