ಬೆಂಗಳೂರು,ನವೆಂಬರ್,27,2025 (www.justkannada.in): ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು ಕಾಂಗ್ರೆಸ್ ಹೈಕಮಾಂಡ್ ನಿಲುವಿನ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿಸಿದೆ. ಈ ಮಧ್ಯೆಯೇ ಇದೀಗ ಡಿಸಿಎಂ ಡಿಕೆ ಶಿವಮಾಕುಮಾರ್ ಮಾರ್ಮಿಕವಾಗಿ ಟ್ವೀಟ್ ವೊಂದನ್ನ ಮಾಡಿದ್ದಾರೆ.
ಕೊಟ್ಟ ಮಾತು ಉಳಿಸಿಕೊಳ್ಳುವುದು ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಟ್ವೀಟ್ ಖಾತೆಯ ಮೂಲಕ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.
ಯಾರೇ ಆಗಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಅದು ಜಡ್ಜ ಆಗಿರಲಿ ಅಧ್ಯಕ್ಷರಾಗಲಿ ಯಾರೇ ಆಗಿರಲಿ ನನ್ನನ್ನು ಸೇರಿಸಿ ಸಹ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಕೊಟ್ಟ ಮಾತಿನ ಶಕ್ತಿಯೇ ವಿಶ್ವದ ಶಕ್ತಿಯಾಗಿದೆ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
Key words: greatest, power , world, DCM DK Shivakumar







