ಚಿಕ್ಕಬಳ್ಳಾಪುರ,ನವೆಂಬರ್,24,2025 (www.justkannada.in): ನಾಯಕತ್ವ ಬದಲಾವಣೆ ಸಂಬಂಧ ಹೈಕಮಾಂಡ್ ಹೇಳಿದ್ರೆ ಮುಂದುವರೆಯುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಹೇಳಿದ ಮೇಲೆ ಅದೇ ವೇದ ವಾಕ್ಯ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದ್ದಾರೆ.
ಶಾಸಕರ ಖರೀದಿ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಕಿಡಿಕಾರಿದ ಡಿಸಿಎಂ ಡಿಕೆ ಶಿವಕುಮಾರ್, ಶಾಸಕರ ಖರೀದಿ ಸಂಸ್ಕೃತಿ ಇರೋದು ಬಿಜೆಪಿಯಲ್ಲಿ. ಅಶೋಕ್ ತಮ್ಮ ಪ್ರವೃತಿಯನ್ನ ನೆನೆಸಿಕೊಂಡಿದ್ದಾರೆ ಅಷ್ಟೆ ಎಂದು ಕುಟುಕಿದರು.
Key words: Power sharing, CM, says, DCM, DK Shivakumar







