ಪವರ್ ವಿಚಾರ ಮುಖ್ಯ ಅಲ್ಲ: ಶ್ರಮಕ್ಕೆ ತಕ್ಕ ಫಲವಿದೆ- ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು,ನವೆಂಬರ್,19,2025 (www.justkannada.in):  ನಮಗೆ ಪವರ್ ವಿಚಾರ ಮುಖ್ಯವಲ್ಲ. ಶ್ರಮಕ್ಕೆ ತಕ್ಕ ಫಲವಿದೆ. ಪವರ್ ಸಿಕ್ಕೇ ಸಿಗುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನುಡಿಮುತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  2028ಕ್ಕೆ ಮತ್ತೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಪವರ್ ಸಿಕ್ಕೇ ಸಿಗುತ್ತೆ ಶ್ರಮದವಿದ್ದಲ್ಲಿ ಫಲವಿದೆ.  ನಾನು ಎಲ್ಲಿರಿತ್ತೇನೋ ಇಲ್ವೋ ಅನ್ನೋದು ಮುಖ್ಯವಲ್ಲ ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ.  ಎಲ್ಲಿ ಭಕ್ತಿ ಇದೆಯೋ ಅಲ್ಲಿ ಫಲವಿದೆ ಎಂದರು.

ಪಕ್ಷ ಅಂದರೆ ದೇವಸ್ತಾನ ಎನ್ನುವುದನ್ನೇ ಕೆಲವರು ಮರೆತಿದ್ದಾರೆ. ಯಾರು ಕಾಂಗ್ರೆಸ್ ಪಕ್ಷದ ಕಚೇರಿ ಕಟ್ಟಲು ಆಸಕ್ತಿ ವಹಿಸಲ್ಲ. ಅಂತಹವರ ಹೆಸರನ್ನ ಹೈಕಮಾಂಡ್ ಗೆ ನೀಡುತ್ತೇನೆ. ಹೈಕಮಾಂಡ್ ನವರೇ ಉತ್ತರ ಕೊಡುತ್ತಾರೆ. ಯಾರು ಪಕ್ಷದ ಕೆಲಸ ಮಾಡುವುದಕ್ಕೆ ಆಸಕ್ತಿ ವಹಿಸಿಲ್ಲವೋ ಅವರಿಗೆ ದೆಹಲಿಯವರು ಸೂಕ್ತ ಸಂದರ್ಭದಲ್ಲಿ ಉತ್ತರ  ಕೊಡುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

Key words: Power, not, issue, Hard work, DCM, DK Shivakumar