ಕಾಂಗ್ರೆಸ್ ಗೆ ಮತ ಹಾಕುವವರನ್ನು ಗುರುತಿಸಿ ಬೇರೆಡೆ  ಶಿಫ್ಟ್ ಮಾಡಿದ್ದಾರೆ- ಡಿಸಿಎಂ ಡಿಕೆ ಶಿವಕುಮಾರ್ ಗಂಭೀರ ಆರೋಪ

ಬೆಂಗಳೂರು,ನವೆಂಬರ್,8,2025 (www.justkannada.in): ಕಾಂಗ್ರೆಸ್ ಗೆ ಮತ ಹಾಕುವವರನ್ನ ಗುರುತಿಸಿ ಮತದಾರರನ್ನ ಶಿಫ್ಟ್ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.

ಮತಗಳ್ಳತನದ ವಿರುದ್ಧ ಕಾಂಗ್ರೆಸ್ ನಿಂದ ಸಹಿ ಸಂಗ್ರಹ ಅಭಿಯಾನ ಹಿನ್ನೆಲೆಯಲ್ಲಿ ಕೆಪಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಕಲ್ಬುರ್ಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲೂ ಮತಗಳ್ಳ ತನ ನಡೆದಿದೆ. ಆಳಂದದಲ್ಲಿ ಮಹಿಳೆಯೊಬ್ಬರ ಸಹೋದರನ ಮತ ಡಿಲೀಟ್ ಆಗಿದೆ. ಈ ಸಂಬಂಧ ದೂರು ಕೊಡುತ್ತಾರೆ ತನಿಖೆಯು ಸಹ ಆರಂಭವಾಗುತ್ತದೆ. ಅಧಿಕಾರಿಗಳು ಕೂಡ ಸಸ್ಪೆಂಡ್ ಆದರು. ಮತಪಟ್ಟಿಯಿಂದ 6ಸಾವಿರ ಮತಗಳನ್ನ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಮತಗಳ್ಳತನ ಸಂಬಂಧ ಈಗಾಗಲೇ ಎಸ್‌ ಐಟಿ ತನಿಖೆ ನಡೆಸುತ್ತಿದ್ದು ಹೊರ ರಾಜ್ಯದವರಿಂದ ಮತ ಡಿಲೀಟ್ ಮಾಡುವ ಪ್ರಯತ್ನ ನಡೆದಿದೆ. ಒಟ್ಟು ರೂ.1,3,000 ನಕಲು ಮಾಡಿದರು. ಗರುಡಾ ಆ್ಯಪ್ ಬಳಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಆರೋಪಿಸಿದರು

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ನ್ಯೂನ್ಯತೆಗಳು ಇದ್ದು ಮಾದೇವಪುರ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ಮತ ದುರ್ಬಳಕೆಯಾಗಿದೆ.  ಒಂದೇ ಮನೆಯಲ್ಲಿ ಹೆಚ್ಚು ವೋಟ್ ಇರುವುದು ಗುರುತು ಮಾಡಿದ್ದೇವೆ. ರಾಹುಲ್ ಗಾಂಧಿ ಕೂಡ ಸುದ್ದಿಗೋಷ್ಠಿ ನಡೆಸಿ ಗಮನ ಸೆಳೆದಿದ್ದಾರೆ. ಬೆಂಗಳೂರಿನಲ್ಲಿ ಮತಗಳ್ಳತನ ಬಗ್ಗೆ ಅಭಿಯಾನ ಕೂಡ ನಡೆಸಿದ್ದೇವೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 2,40,000 ವೋಟ್ ಇತ್ತು. ಕಾಂಗ್ರೆಸ್ ಗೆ ಮತ ಹಾಕುವವರನ್ನು ಗುರುತಿಸಿ ಮತದಾರರನ್ನ ಶಿಫ್ಟ್ ಮಾಡಿದ್ದಾರೆ ಮತದಾರರನ್ನು ಬೇರೆ ಕಡೆಗೆ ಶಿಫ್ಟ್ ಮಾಡಿ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: Congress, vote, shifted, DCM, DK Shivakumar, serious allegations