ನಾನು ಹೆದರುವ ಮಗ  ಅಲ್ಲ: ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬನ್ನಿ- ಹೆಚ್ ಡಿಕೆಗೆ ಡಿಕೆಶಿ ಸವಾಲ್

ಬೆಂಗಳೂರು,ಅಕ್ಟೋಬರ್,25,2025 (www.justkannada.in): ಹಿಟ್ ಅಂಡ್ ರನ್ ಬ್ಲಾಕ್ ಮೇಲ್ ಮಾಡುವುದಲ್ಲ. ಕೇವಲ ಸುಳ್ಳು ಆರೋಪ ಮಾಡುತ್ತಾ ಹೆದರಿಸುವುದಲ್ಲ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬನ್ನಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ಸವಾಲು ಹಾಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಹೆಚ್ ಡಿಕೆ ಬಹಿರಂಗ ಚರ್ಚೆ ಬಂದು ದಾಖಲೆ ಸಮೇತ ಮಾತನಾಡಲಿ. ನನ್ನ ಹುಳುಕು ಏನಿದೆ ಬಿಚ್ಚಿಡು. ನಿನ್ನದನ್ನ ನಾನು ಬಿಚ್ಚಿಡುತ್ತೇನೆ ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ.   ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 8 ರಿಂದ 9 ಸ್ಥಾನಗಳಿಗೆ ಕುಸಿಯಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ ವಾದ ಪ್ರತಿವಾದ ಇರಬೇಕು ಹೆಚ್ ಡಿಕೆ ನನ್ನ ವಿರುದ್ದ ದಾಖಲೆ ತಂದು ಚರ್ಚೆಯಲ್ಲಿ ಭಾಗವಹಿಸಲಿ. ಕುಮಾರಸ್ವಾಮಿ ಬಳಿ ಸಾಕ್ಷಿ ಗುಡ್ಡೆ ಇದ್ದರೆ ತರಲಿ. ಕೇವಲ ಸುಳ್ಳು ಆರೋಪ ಮಾಡುತ್ತಾ ಹೆದರಿಸುವುದಲ್ಲ. ಜೇಬು ತೋರಿಸಿ ಪೆನ್ ಡ್ರೈವ್ ತೆಗೆಯುತ್ತೇನೆ ಎನ್ನುವುದಲ್ಲ ಎಂದು ಟಾಂಗ್ ಕೊಟ್ಟರು.

ಬಹಿರಂಗ ಚರ್ಚೆಗೆ ಬರಲಿ ಅವಮಾನವೇನು ಆಗಲ್ಲ ಕುಮಾರಸ್ವಾಮಿ ನನ್ನ ಯಾವ ವಿಚಾರ ಬಿಚ್ಚಿಡುತ್ತಾರೋ ಬಿಚ್ಚಿಡಲಿ ಅವರ ಬಳಿಯೇ ಕೇಂದ್ರ ಸರ್ಕಾರ ಇದೆಯಲ್ಲ. ಡಿಕೆ ಶಿವಕುಮಾರ್ ಅದಕ್ಕೆಲ್ಲಾ ಹೆದರುವ ಮಗ ಅಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: open debate, with, documents, DK Shivakumar, challenges, HDK