ಬೆಂಗಳೂರು,ಸೆಪ್ಟಂಬರ್,30,2025 (www.justkannada.in): ಮೊದಲಿನಿಂದಲೂ ನನ್ನನ್ನ ಜೈಲಿಗೆ ಹಾಕಲು ಷಡ್ಯಂತ್ರ ಸಂಕಲ್ಪ ನಡೆಯುತ್ತಿದೆ. ಹಬ್ಬ ಮುಗಿಯಲಿ ನಂತರ ಹೆಚ್ ಡಿ ಕುಮಾರಸ್ವಾಮಿಗೆ ಉತ್ತರ ಕೊಡುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಇಂದು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಹೆಚ್ ಡಿಕೆ ಏನೇನು ಮಾತನಾಡಿದ್ದಾರೆ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಹಬ್ಬ ಮುಗಿಯಲಿ ಹೆಚ್ ಡಿಕೆಗೆ ಉತ್ತರ ಕೊಡುತ್ತೇನೆ. ಮೊದಲಿನಿಂದಲೂ ನಮ್ಮ ವಿರುದ್ದ ಅವರ ಕುಟುಂಬ ಷಡ್ಯಂತ್ರ ಮಾಡಿದೆ. ಸಿಎಂ ಆಗಿದ್ದಾಗ ನನ್ನ ತಂಗಿ ತಮ್ಮನ ಮೇಲೆ ಕೇಸ್ ಹಾಕಿದರು. ಈಗಲೂ ಅದೇ ರೀತಿ ಷಡ್ಯಂತ್ರ ಮಾಡುತ್ತಿದ್ದಾರೆ. ಇದು ಕೊನೆಯಾಗಬೇಕು ಯಾವುದಾದರೂ ಮಾಧ್ಯಮದಲ್ಲಿ ಚರ್ಚೆಗೆ ಬರಲಿ ಪಕ್ಕದಲ್ಲಿ ಅವರನ್ನೂ ಕೂರಿಸಿ ಎಲ್ಲವನೂ ಚರ್ಚಿಸೋಣ.
ಅಸೆಂಬ್ಲಿಯಲ್ಲಿ ಚರ್ಚೆಗೆ ಕರೆದಿದ್ದೆ ಪಾಪಾ ಪಾರ್ಲಿಮೆಂಟ್ ಗೆ ಹೋದರು. ಹಿಟ್ ಅಂಡ್ ರನ್ ಮಾಡೋದು ಬೇಡ. ನನ್ನಲ್ಲಿರುವ ಅಗಾಧ ಭಂಡಾರದಿಂದ ಎಲ್ಲವನ್ನೂ ತೆಗೆಯುತ್ತೇನೆ. ಕುಮಾರಸ್ವಾಮಿ ಕೂಡ ತಮ್ಮ ಬತ್ತಳಿಕೆಯಲ್ಲಿ ಏನಿದೆ ಎಲ್ಲವನ್ನೂ ತೆಗೆಯಲಿ. ಕುಮಾರಸ್ವಾಮಿ ಜಡ್ಜ್ ರೀತಿ ಮಾತನಾಡಿದ್ದಾರೆ. ಜಡ್ಜ್ ತಾನೇ ಜೈಲಿಗೆ ಹಾಕೋದು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: answer, HDK, after, festival, DCM, DK Shivakumar