ದೆಹಲಿಯ ಪ್ರಧಾನಿ ಮೋದಿ ನಿವಾಸದ ಮುಂದೆಯೂ ರಸ್ತೆಗುಂಡಿಗಳಿವೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಸೆಪ್ಟಂಬರ್,23,2025 (www.justkannada.in): ಬೆಂಗಳೂರಿನಲ್ಲಿ ಮಾತ್ರವಲ್ಲ, ದೆಹಲಿಯಲ್ಲಿ ಪ್ರಧಾನಿ ಮೋದಿ ಮನೆ ಮುಂದೆಯೂ ರಸ್ತೆಗುಂಡಿಗಳಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ವಿಚಾರ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ದೆಹಲಿಗೆ ಹೋಗಿದ್ದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ದೆಹಲಿಯಲ್ಲಿಯೂ ರಸ್ತೆಗುಂಡಿಗಳಿವೆ. ದೆಹಲಿಯಲ್ಲಿ ಒಂದು ಸುತ್ತಿ ಬಂದು ನೋಡಿದೆ. ಪ್ರಧಾನಿ ಮೋದಿಯವರ ಮನೆ ಮುಂದೆಯೂ ರಸ್ತೆ ಗುಂಡಿಗಳಿವೆ. ಪ್ರಧಾನಿಗಳ ಮನೆ ಮುಂದೆ ಎಷ್ಟು ರಸ್ತೆಗುಂಡಿಗಳಿವೆ ನೋಡಿ ಎಂದರು.

ಇದು ಬರಿ ಬೆಂಗಳೂರು, ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಯೂ ಇದೇ ರೀತಿ ಸಮಸ್ಯೆಗಳಿವೆ. ಆದರೆ ನಾವು ರಸ್ತೆಗುಂಡಿ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಜಿಬಿಎ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚುತ್ತಿದ್ದಾರೆ ಎಂದರು.

Key words: potholes, Prime Minister, Modi, residence, Delhi too, DCM, DK Shivakumar