ಮತಗಳ್ಳತನ: ರಾಹುಲ್ ಗಾಂಧಿ ಆರೋಪದಲ್ಲಿ ಸತ್ಯವಿದೆ-ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಸೆಪ್ಟಂಬರ್,18,2025 (www.justkannada.in):  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಮತಗಳ್ಳತನ ಆರೋಪದಲ್ಲಿ ಸತ್ಯವಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ರಾಹುಲ್ ಗಾಂಧಿ ಮಾತಿನಲ್ಲಿ ಸತ್ಯವಿದೆ. ಕೇಂದ್ರ ಚುನಾವಣಾ ಆಯೋಗ ಪ್ರತಿಕ್ರಿಯೆ ಕೊಡದೆ ಇರುವುದು ಸತ್ಯ.  ಚುನಾವಣಾ ಆಯೋಗ ನಾವು ಕೇಳಿದ ಮಾಹಿತಿ ಕೊಡದಿರುವುದು ಸತ್ಯ ಮತದಾರರ ಹೆಸರು ಡಿಲೀಟ್ ಮಾಡುವಾಗ ಒಟಿಪಿ ಹೋಗುತ್ತದೆ ರಾಜಕೀಯ ಪಕ್ಷದವರು ಆಕ್ಷೇಪ ಎತ್ತುತ್ತಾರೋ ಬಿಡುತ್ತಾರೋ ಚುನಾವಣಾ ಆಯೋಗ ಪ್ರತಿಕ್ರಿಯೆ ಕೊಡಬೇಕಲ್ವಾ? ಸರ್ಕಾರವೇ ಕೋರ್ಟ್ ಗೆ ಹೋಗಲು ಆಗುತ್ತಾ? ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್,  ರಸ್ತೆ ಗುಂಡಿಗಳ ಪಟ್ಟಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ.  4 ಸಾವಿರ ರಸ್ತೆ ಗುಂಡಿಗಳಿವೆ ಎಂಬ ಮಾಹಿತಿ ಇದೆ.  ಈ ಬಗ್ಗೆ ನಾನು ಸಿಎಂ ಚರ್ಚಿಸುತ್ತೇವೆ. ಶನಿವಾರ ಈ ಬಗ್ಗೆ ಮಾತನಾಡುತ್ತೇನೆ ಎಂದರು.

Key words: Voting, Rahul Gandhi, alleges , truth, DCM DK Shivakumar