ನಾವು ಯಾರ ಪರವೂ ಅಲ್ಲ, ನ್ಯಾಯದ ಪರ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಆಗಸ್ಟ್,23,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ದೂರು ಪ್ರಕರಣ‍ಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ದೂರುದಾರ ಮಾಸ್ಕ್ ಮ್ಯಾನ್ ನನ್ನ ಎಸ್ ಐಟಿ ಬಂಧಿಸಿದ್ದು ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಡಿ.ಕೆ ಶಿವಕುಮಾರ್, ಪ್ರಕರಣ. ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ ತನಿಖೆ ನಡೆಯುತ್ತಿದೆ  ಸತ್ಯ ಹೊರ ಬರುತ್ತೆ. ಈಗಾಗಲೇ ಪ್ರಕರಣ ಕುರಿತು ಸಿಎಂ ಮತ್ತು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ.  ನಾವು ಯಾರ ಪರವೂ ಅಲ್ಲ.  ನ್ಯಾಯದ ಪರ.  ಎಸ್ ಐಟಿ ತನಿಖೆ ಬಗ್ಗೆ ಗೃಹ ಸಚಿವರು ನೋಡಿಕೊಳ್ಳುತ್ತಾರೆ ಎಂದರು.

ಈ ನಡುವೆ ಪ್ರಕರಣ ಸಂಬಂಧ ದೂರುದಾರ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನ ಬಂಧಿಸಿರುವ ಎಸ್ ಐಟಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು ಕೆಲವೇ ಕ್ಷಣಗಳಲ್ಲಿ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.

Key words: DCM, DK Shivakumar, Dharmasthala case