ಬೆಂಗಳೂರು,ಆಗಸ್ಟ್,18,2025 (www.justkannada.in): ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂಬ ಮಹೇಶ್ ತಿಮರೋಡಿ ಹೇಳಿಕೆ ಸಾಕಷ್ಟು ಗದ್ದಲವನ್ನುಂಟು ಮಾಡಿದ್ದು ಸದನದಲ್ಲೂ ಚರ್ಚೆಯಾಗಿದೆ.
ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಮಹೇಶ್ ತಿಮರೋಡಿ ಬಿಜೆಪಿ ಕಾರ್ಯಕರ್ತನೇ. ಬಹಳ ಹಿಂದಿನಿಂದ ಸಿಎಂ ವಿರುದ್ದ ಮಹೇಶ್ ತಿಮರೋಡಿ ಹೇಳಿದ್ದಾನೆ. ಈಗ ಬಿಜೆಪಿ ನಾಯಕರ ಮೇಲೆ ಹೇಳಿಕೆ ನೀಡಿದ್ದಾರೆ. ಅದಕ್ಕಾಗಿ ಬಿಜೆಪಿಯವರು ಮಾತನಾಡುತ್ತಿದ್ದಾರೆ ಎಂದರು.
ಮಹೇಶ್ ತಿಮರೋಡಿ ಬಿಜೆಪಿ ಅವರ ಕಾರ್ಯಕರ್ತ ತಿಮರೋಡಿಯ ಹಿಂದಿನ ದಾಖಲೆಗಳನ್ನ ಎಲ್ಲಾ ತೆಗೆದುನೋಡಿ ಎಂದು ಡಿಕೆ ಶಿವಕುಮಾರ್ ಹೇಳಿದರು.
Key words: Mahesh Timarodi, BJP, worker , DCM DK Shivakumar