ಬಿಜೆಪಿಯವರಿಂದ ರಾಜಕೀಯ: ಹಿಂದುತ್ವ ತಮ್ಮ ಆಸ್ತಿ ಅಂದುಕೊಂಡಿದ್ದಾರೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಆಗಸ್ಟ್,16,2025 (www.justkannada.in):  ಧರ್ಮಸ್ಥಳ ಚಲೋ ಅಭಿಯಾನ ನಡೆಸುತ್ತಿರುವ ಬಿಜೆಪಿ ವಿರುದ್ದ  ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದು, ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಹಿಂದುತ್ವ ತಮ್ಮ ಆಸ್ತಿ ಅಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಧರ್ಮಸ್ಥಳದ ಕುರಿತು ಅಪಪ್ರಚಾರ ಹಿನ್ನೆಲೆಯಲ್ಲಿ ಇಂದು ಬಿಜೆಪಿ ನಾಯಕರು ಧರ್ಮಸ್ಥಳ ಚಲೋ  ನಡಸುತ್ತಿದ್ದಾರೆ.  ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಎಸ್ ಐಟಿ ರಚನೆ ಮಾಡಿದಾಗ ತನಿಖೆ ಆರಂಭಕ್ಕೂ ಮೊದಲು ಬಿಜೆಪಿಯವರು ಧರ್ಮಸ್ಥಳದ ಕುರಿತು ಯಾಕೆ ಮಾತನಾಡಿಲ್ಲ. ಬಿಜೆಪಿಯವರು ಈಗ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರು ಹಿಂದುತ್ವ ತಮ್ಮ ಮನೆ ಆಸ್ತಿ ಅಂತ ಅಂದುಕೊಂಡಿದ್ದಾರೆ. ಹಿಂದುತ್ವ ಯಾರ ಆಸ್ತಿಯೂ ಅಲ್ಲ ಅವರವರ ಭಕ್ತಿ ಹಾಗೂ ನಂಬಿಕೆಯ ಮೇಲೆ ಇದೆ ಎಂದು ಹರಿಹಾಯ್ದರು.

ಬಿಜೆಪಿಯವರು ರಾಜಕಾರಣ ಬಿಟ್ಟು ಬೇರೇನು ಮಾತಾಡಲ್ಲ. ಬಿಜೆಪಿಗೆ ಧರ್ಮಸ್ಥಳದ ಬಗ್ಗೆ ಪ್ರೀತಿ ಇಲ್ಲ ಬಿಜೆಪಿ ಅವರಿಗೆ ರಾಜಕಾರಣ ಮಾಡುವುದಕ್ಕೆ ಧರ್ಮಸ್ಥಳ ಬೇಕು. ಆದರೆ ನಮಗೆ ರಾಜಕಾರಣ ಮಾಡಲು ಧರ್ಮಸ್ಥಳ ಬೇಡ ಎಂದು ಚಾಟಿ ಬೀಸಿದರು.

Key words: Darmasthala case, BJP, Politics, DCM, DK Shivakumar