Thursday, August 20, 2026

BDA Apartments

Home Front Page ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗುತ್ತೆ ಎಂಬುದು ಸುಳ್ಳು, ಇದರಲ್ಲಿ ಯಾವುದೇ ಹುರುಳಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗುತ್ತೆ ಎಂಬುದು ಸುಳ್ಳು, ಇದರಲ್ಲಿ ಯಾವುದೇ ಹುರುಳಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಚಾಮರಾಜನಗರ,ಮೇ,21,2026 (www.justkannada.in): ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತೆ ಅಂತಾ ಇತ್ತು. ಅವೆಲ್ಲಾ ಸುಳ್ಳು ಅಂತಹ ವಿಚಾರದಲ್ಲಿ ಯಾವುದೇ ಹುರುಳಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಧಾರ್ಮಿಕ ಪ್ರದೇಶದ ಪುಣ್ಯಭೂಮಿ ಚಾಮರಾಜನಗರ.   ಇಂದು ರಂಗನಾಥಸ್ವಾಮಿಯ ದೇಗುಲದ ಜೀರ್ಣೋದ್ದಾರ ಕಾರ್ಯಕ್ರಮ. ಭಕ್ತ ಭಗವಂತನ ನಡುವೆ ವ್ಯವಹರಿಸುವ ಸ್ಥಳವೇ ದೇವಾಲಯ ಎಂದರು.

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ. ಕುಟುಂಬ ಸದಸ್ಯರಿಗೆ ಕೆಲಸ ಕೊಡಿಸಿರುವ ಸಾರ್ಥಕತೆಯಿದೆ.  ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.

ತಮಿಳುನಾಡಿಗೆ 177 ಟಿಎಂಸಿ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ನಿಯಮ ವಿಚಾರ. ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುತ್ತೇವೆ  ಎಂದರು.

Key words: Chamarajanagara, lose, power, lie, DCM, DK Shivakumar