ಬೆಂಗಳೂರು,ಜನವರಿ,14,2026 (www.justkannada.in): ನಿನ್ನೆ ಮೈಸೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ ಬಳಿಕ ಇಂದು ಬೆಳಿಗ್ಗೆ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ಮಾರ್ಮಿಕ ಟ್ವೀಟ್ ಮಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಹೊಸದೇನು ಅಲ್ಲ ಒಕ್ಕಲಿಗ ಬ್ಯುಸಿನೆಸ್ ಕಾರ್ಯಕ್ರಮಕ್ಕೆ ಹೋಗಿದ್ದೆ. ಅವರಿಗೆ ನನ್ನ ಅನುಭವದ ಮಾತುಗಳನ್ನ ಹೇಳಿದ್ದೇನೆ. ಜನವರಿ 16 ರಂದು ನಾನು ದೆಹಲಿಗೆ ಹೋಗುತ್ತೇನೆ ಎಂದಿದ್ದಾರೆ.
ನಾನು ಯಾವುದನ್ನು ಆನ್ ರೆಕಾರ್ಡ್ ಇಟ್ಟುಕೊಳ್ಳಲ್ಲ. ನಾನು ಯಾವಾಗಲೂ ರೆಕಾರ್ಡ್ ನಲ್ಲೇ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: Delhi, January 16th, DCM, DK Shivakumar







