ಬೆಂಗಳೂರು,ಜನವರಿ,8,2026 (www.justkannada.in): ಆದಷ್ಟು ಬೇಗ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗಬಹುದು .ವಿಲೀನ ಆದರೆ ಒಳ್ಳೇಯದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಇಂದು ಮಾದ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಜೆಡಿಎಸ್ ಗೆ ಸಿದ್ದಾಂತ ವಿಲ್ಲ ಅವರದೊಂದು ನೀತಿ ಇಲ್ಲ. ಅದಷ್ಟು ಬೇಗ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ ಡಿಕೆ ಶಿವಕುಮಾರ್, ಮಿಸ್ಟರ್ ಕುಮಾರಸ್ವಾಮಿ ರಾಜಕೀಯದಲ್ಲಿ ನಿಮಗಿಂತ ನಂಗೆ ಅನುಭವ ಹೆಚ್ಚು ನಾಣು ಸಿಎಂಆಗದೆ ಇರಬಹುದು . ಸುದೀರ್ಘ ಕಾಲ ಸಚಿವನಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಆಡಳಿತದಲ್ಲಿ ಕುಮಾರಸ್ವಾಮಿಗಿಂತ ಹೆಚ್ಚು ಅನುಭವವಿದೆ ಎಂದರು.
Key words: JDS, merge, with, BJP, soon, DCM, DK Shivakumar







