ನಾವು ಲೈಫ್ ಟೈಮ್ ವರ್ಕರ್ : ನಾನು ಸ್ಟೇಜ್ ಮೇಲೆ ಕೂತು ಭಾಷಣ ಮಾಡಿ ಹೋಗೋ ಕೆಲಸ ಮಾಡಿಲ್ಲ-ಡಿಕೆ ಶಿವಕುಮಾರ್

ಬೆಂಗಳೂರು,ಡಿಸೆಂಬರ್,25,2025 (www.justkannada.in): ನಾವು ಲೈಫ್ ಟೈಮ್ ವರ್ಕರ್ . ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ. ಕಸ ಗುಡಿಸಿದ್ದೇನೆ. ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದ್ದೇನೆ.  ನಾನು ಸ್ಟೇಜ್ ಮೇಲೆ ಕೂತು ಭಾಷಣ ಮಾಡಿ ಹೋಗುವ ಕೆಲಸ ಮಾಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿ ಚರ್ಚೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಿಡಬ್ಲ್ಯಸಿ ಸಭೆಗೆ ನನ್ನನ್ನು ಕರೆದಿಲ್ಲ ಸಿಎಂ ಹೋಗುತ್ತಿದ್ದಾರೆ.   ನನ್ನನ್ನು ಕರೆದಿಲ್ಲ. ಕರೆದರೆ ಹೋಗುತ್ತೇನೆ ಮಲ್ಲಿಕಾರ್ಜುನ ಖರ್ಗೆ ಜತೆ ಬೇರೆ ವಿಚಾರ ಚರ್ಚೆ ಮಾಡಿಲ್ಲ ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದು  ನಾನು ಸಿಎಂ ಹೇಳಿದ್ದೇವೆ ಎಂದರು.

ಯಾವ ಪೋಸ್ಟ್ ಇದ್ದರೂ ನಾನು ಪಕ್ಷದ ಕಾರ್ಯಕರ್ತನೇ . ನಾವು ಲೈಫ್ ಟೈಮ್ ವರ್ಕರ್ . ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ. ಕಸ ಗುಡಿಸಿದ್ದೇನೆ. ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದ್ದೇನೆ.  ನಾನು ಸ್ಟೇಜ್ ಮೇಲೆ ಕೂತು ಭಾಷಣ ಮಾಡಿ ಹೋಗಲ್ಲ ಎಂದರು.

Key words: DCM, DK Shivakumar, meet, AICC, President, Mallikarjuna kharge