ರಾಜ್ಯದಲ್ಲಿ ಏನಾದ್ರೂ ಅನ್ಯಾಯವಾಗಿದ್ರೆ ಅದಕ್ಕೆ ಕೇಂದ್ರ ಕಾರಣ- ಡಿಸಿಎಂ ಡಿಕೆ ಶಿವಕುಮಾರ್

ಬೆಳಗಾವಿ,ಡಿಸೆಂಬರ್,9,2025 (www.justkannada.in): ರಾಜ್ಯಕ್ಕೆ ಏನಾದರೂ ಅನ್ಯಾಯವಾಗಿದ್ದರೆ ಅದಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆರೋಪಿಸಿದರು.

ಬಿಜೆಪಿಯಿಂದ ರೈತರ ಪರ ಪ್ರತಿಭಟನೆ ವಿಚಾರ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರದ ವಿರುದ್ದ ಬಿಜೆಪಿ ಪ್ರತಿಭಟನೆ ಮಾಡಬೇಕಿರೋದು. ರಾಜ್ಯದಲ್ಲಿ ಏನಾದರೂ ಅನ್ಯಾಯ ಆಗಿದ್ರೆ ಕೇಂದ್ರ ಸರ್ಕಾರ ಕಾರಣ. ಸಕ್ಕರೆ ಬೆಲೆ ಕಬ್ಬು, ಮೆಕ್ಕೆಜೋಳ,  ಎಥೆನಾಲ್ ನಲ್ಲಿ ಅನ್ಯಾಯವಾಗಿದೆ.  ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಡುತ್ತಿಲ್ಲ.  ಬಹಳ ಹೋರಾಟ ಮಾಡಿ ಮೇಕೆದಾಟು ವಿಚಾರದಲ್ಲಿ ನ್ಯಾಯ ಸಿಕ್ಕಿದೆ ಎಂದು ಕಿಡಿಕಾರಿದರು.

ನಾವು ರೈತರ ಪರ ಇರುವ ಸರ್ಕಾರ ಬೆಳಗಾರರಿಗೆ  ರೈತರ ಮೇಲಿನ ಕಾಳಜಿಯಿಂದ ಬೆಂಬಲ ಬೆಲೆ ನೀಡಿದ್ದೇವೆ. ರೈತರ ಸಮಸ್ಯೆಗಳಿಗೆ ಯಾಕೆ ಕೇಂದ್ರ ಸ್ಪಂದಿಸುತ್ತಿಲ್ಲ. ಅಧಿವೇಶನದಲ್ಲಿ ಈ ಬಗ್ಗೆ ವಿಪಕ್ಷಗಳು ಪ್ರಸ್ತಾಪಿಸಿ ಚರ್ಚಿಸಲಿ ಎಂದು ಟಾಂಗ್ ಕೊಟ್ಟರು.

Key words: injustice, Central government, fault, DCM, DK Shivakumar