Wednesday, August 12, 2026

BDA Apartments

Home Front Page ಮಾಜಿ ಸ್ಪೀಕರ್ ಕೆ.ಆರ್ ಪೇಟೆ ಕೃಷ್ಣ ಅವರನ್ನ ಭೇಟಿ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ್…

ಮಾಜಿ ಸ್ಪೀಕರ್ ಕೆ.ಆರ್ ಪೇಟೆ ಕೃಷ್ಣ ಅವರನ್ನ ಭೇಟಿ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ್…

ಮೈಸೂರು,ನ,22,2019(www.justkannada.in):   ಮಾಜಿ ಸ್ಪೀಕರ್ ಕೆ.ಆರ್ ಪೇಟೆ ಕೃಷ್ಣ ಅವರನ್ನ ಭೇಟಿ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ್ ಕೆ.ಆರ್ ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನ ಬೆಂಬಲಿಸುವಂತೆ ಮನವಿ ಮಾಡಿದರು.

ಮೈಸೂರಿನ ಕುವೆಂಪುನಗರದಲ್ಲಿವ  ಮಾಜಿ ಸ್ಫೀಕರ್ ಕೆ.ಆರ್.ಪೇಟೆ ಕೃಷ್ಣ ನಿವಾಸಕ್ಕೆ ಡಿಸಿಎಂ ಡಾ.‌ಅಶ್ವಥ್ ನಾರಾಯಣ್ ಭೇಟಿ ನೀಡಿ  ಕೃಷ್ಣರವರ ಕುಶಲೋಪರಿ ವಿಚಾರಿಸಿದರು. ಕೃಷ್ಣ ಅವರು ಕೆ.ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕರಾಗಿದ್ದು, ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಅಪಾರ ಬೆಂಬಲಿಗರನ್ನು  ಹೊಂದಿದ್ದಾರೆ.

ಇನ್ನು ಉಪಚುನಾವಣೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಕೆ.ಆರ್.‌ ಪೇಟೆ ಚುನಾವಣಾ ಉಸ್ತುವಾರಿ ಹೊತ್ತಿದ್ದು ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಇವರು  ಪ್ರಯತ್ನ ಮಾಡಬೇಕಿದೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರನ್ನು ಬೆಂಬಲಿಸುವಂತೆ ಕೆ.ಆರ್ ಪೇಟೆ ಕೃಷ್ಣ ಅವರಿಗೆ ಡಿಸಿಎಂ ಅಶ್ವತ್ ನಾರಾಯಣ್ ಮನವಿ ಮಾಡಿದ್ದಾರೆ.

Key words: DCM -Ashwath Narayan-met -former speaker- KR Pate Krishna