Wednesday, October 7, 2026

BDA Apartments

immense respect BDA JK_Adv BDA Adv
Home Front Page ಚುನಾವಣೆ ಬಳಿಕ ರಾಜ್ಯದಲ್ಲೂ ಮಹಾರಾಷ್ಟ್ರದ ಪರಿಸ್ಥಿತಿ..? ಹೆಚ್.ಡಿಡಿ ಮತ್ತು ಹೆಚ್.ಡಿಕೆ ಕನಸು ಕಾಣ್ತಿದ್ದಾರೆ ಎಂದ ಸಚಿವ...

ಚುನಾವಣೆ ಬಳಿಕ ರಾಜ್ಯದಲ್ಲೂ ಮಹಾರಾಷ್ಟ್ರದ ಪರಿಸ್ಥಿತಿ..? ಹೆಚ್.ಡಿಡಿ ಮತ್ತು ಹೆಚ್.ಡಿಕೆ ಕನಸು ಕಾಣ್ತಿದ್ದಾರೆ ಎಂದ ಸಚಿವ ಶ್ರೀರಾಮುಲು…

ದಾವಣಗೆರೆ,ನ,28,2019(www.justkannada.in):  ಉಪಚುನಾವಣೆ ಬಳಿಕ ರಾಜ್ಯದಲ್ಲೂ ಮಹಾರಾಷ್ಟ್ರದ ಪರಿಸ್ಥಿತಿ ಬರಬಹುದು. ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಆರೋಗ್ಯ ಸಚಿವ ವಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಆದಂತೆ ರಾಜ್ಯದಲ್ಲೂ ಆಗಬಹುದು ಎಂದು ಹೆಚ್.ಡಿ ದೇವೇಗೌಡರು ಮತ್ತು ಹೆಚ್.ಡಿ ಕುಮಾರಸ್ವಾಮಿ ಕನಸು ಕಾಣುತ್ತಿದ್ದಾರೆ. ಆದರೆ ಮಹಾರಾಷ್ಟ್ರದ ಪರಿಸ್ಥಿತಿ ರಾಜ್ಯದಲ್ಲಿ ಬರಲ್ಲ ಎಂದು ಸಚಿವ ಶ್ರೀರಾಮುಲು ತಿರುಗೇಟು ನೀಡಿದರು.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು,  ಡಿ.ಕೆ ಶಿವಕುಮಾರ್ ಅಂತವರನ್ನ ಬಹಳಷ್ಟು ಜನರನ್ನ ನೋಡಿದ್ದೇನೆ. ಫಲಿತಾಂಶದ ಬಳಿಕ ಡಿ.ಕೆ ಶಿವಕುಮಾರ್ ಬುಗುರಿ ಆಡಿಸಲಿ. ನಾವು ಗೆದ್ದು ತೋರಿಸುತ್ತೇವೆ ಎಂದು ಟಾಂಗ್ ನೀಡಿದರು.

ಕಾಂಗ್ರೆಸ್ ಪಕ್ಷದಲ್ಲೀಗ ಸಿದ್ಧರಾಮಯ್ಯ ಒಬ್ಬಂಟಿಯಾಗಿದ್ದಾರೆ. ಒಬ್ಬಂಟಿಯಾಗಿದ್ದರೂ ನನ್ನ ವಿರುದ್ದ ವಾಗ್ದಾಳೀ ನಡೆಸುತ್ತಿದ್ದಾರೆ. ಅನಗತ್ಯವಾಗಿ ನನ್ನ ವಿರುದ್ದ ವಾಗ್ದಾಳಿ ನಡೆಸೋದಯ ಸರಿಯಲ್ಲ ಎಂದು ಸಿದ್ಧರಾಮಯ್ಯ ವಿರುದ್ದ ಶ್ರೀರಾಮುಲು ಕಿಡಿಕಾರಿದರು.

Key words: davanagere-minister- sriramulu-tong- former prime minister-hd devegowda