‘ದಮಯಂತಿ’ ಪಾತ್ರ ಮಾಡೋಕೆ ಧೈರ್ಯ ಬೇಕು ಎಂದ ದರ್ಶನ್ !

ಬೆಂಗಳೂರು, ನವೆಂಬರ್ 13, 2019 (www.justkannada.in): ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಸಿನಿಮಾ ಟ್ರೈಲರ್ ಮತ್ತು ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲ್ಗೊಂಡಿದ್ದರು.

ಈ ವೇಳೆ ರಾಧಿಕಾ ಜೊತೆಗಿನ ಸ್ನೇಹ‌, ಅವರ ಜೊತೆ ಮಾಡಿದ್ದ ಸಿನಿಮಾಗಳ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಮಂಡ್ಯ ಮತ್ತು ಅನಾಥರು ಸಿನಿಮಾದಲ್ಲಿ ನಟಿಸಿದ್ದೆವು. ದಮಯಂತಿ ಸಿನಿಮಾ ಅದ್ಭುತವಾಗಿ ಬಂದಿದೆ. ಇಂತಹ ಪಾತ್ರ ಮಾಡೋಕೆ ಧೈರ್ಯ ಬೇಕು. ರಾಧಿಕಾ ತಮ್ಮ ಡೆಡಿಕೇಷನ್‌ನಿಂದಲೇ ಈ ಸ್ಥಾನಕ್ಕೆ ಬಂದು ನಿಂತಿದ್ದಾರೆ ಎಂದು ಹೇಳಿದರು.