ದಾಖಲೆ ಬರೆದ ಚಾಲೆಂಜಿಂಗ್ ಸ್ಟಾರ್ ‘ಒಡೆಯ’ ಟ್ರೇಲರ್

ಮೈಸೂರು, ಡಿಸೆಂಬರ್ 01, 2019 (www.justkannada.in): ನಟ ದರ್ಶನ್​ ಅಭಿನಯದ ಬಹುನಿರೀಕ್ಷಿತ ‘ಒಡೆಯ’ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು ದಾಖಲೆ ಬರೆದಿದೆ.

ಇನ್ನೂ ಎಂ.ಡಿ. ಶ್ರೀಧರ್‌ ನಿರ್ದೇಶನದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ನಟನೆಯ ‘ಒಡೆಯ’ ಸಿನಿಮಾ ಡಿಸೆಂಬರ್‌ 12ರಂದು ಬಿಡುಗಡೆಯಾಗಲಿದೆ. ಸಿನಿಮಾದ ಟೀಸರ್​ ಹಾಗೂ ‘ಕಾಣೆಯಾಗಿರುವೆ ನೀನು’ ಲಿರಿಕಲ್​ ಸಾಂಗ್ ​ಬಿಡುಗಡೆಯಾಗಿ ದಾಖಲೆ ಬರೆದಿದ್ದು ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆಯನ್ನು ಮಾಡಿದೆ.

ಸನ ತಿಮ್ಮಯ್ಯ ಈ ಚಿತ್ರದ ನಾಯಕಿ. ದೇವರಾಜ್‌, ರವಿಶಂಕರ್‌, ಸಾಧುಕೋಕಿಲ.ಚಿಕ್ಕಣ್ಣ.ಸೇರಿದಂತೆ ಅನೇಕರು ಸಿನಿಮಾದಲ್ಲಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಎನ್‌. ಸಂದೇಶ್‌ ಬಂಡವಾಳ ಹೂಡಿದ್ದಾರೆ. ಎ.ವಿ. ಕೃಷ್ಣಕುಮಾರ್‌ (ಕೆ.ಕೆ.) ಛಾಯಾಗ್ರಹಣವಿದೆ.