ಚಿತ್ರಮಂದಿರಗಳಲ್ಲಿ ‘ಒಡೆಯ’ನಾಗಿ ಚಾಲೆಂಜಿಂಗ್ ಸ್ಟಾರ್ ಅಬ್ಬರ

ಬೆಂಗಳೂರು, ಡಿಸೆಂಬರ್ 12, 2019 (www.justkannada.in): ಇಂದು ಡಿ ಬಾಸ್ ಅಭಿನಯಿಸಿರುವ ‘ಒಡೆಯ’ ಸಿನಿಮಾ ರಿಲೀಸ್ ಆಗುತ್ತಿದೆ.

ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಈಗಾಗಲೇ ಟೀಸರ್, ಟ್ರೈಲರ್ ದಾಖಲೆಯ ವೀಕ್ಷಣೆ ಪಡೆದಿದ್ದು, ಹಾಡುಗಳೂ ಸೂಪರ್ ಹಿಟ್ ಆಗಿವೆ.

ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಯಜಮಾನ, ಕುರುಕ್ಷೇತ್ರ ಉತ್ತಮ ಗಳಿಕೆ ಮಾಡಿತ್ತು. ಈಗ ಒಡೆಯ ಕೂಡಾ ಅದೇ ದಾಖಲೆಗೆ ಸೇರಬಹುದು ಎಂಬ ನಿರೀಕ್ಷೆ ಡಿ ಬಾಸ್ ಅಭಿಮಾನಿಗಳಲ್ಲಿದೆ.