ಟ್ವಿಟ್ಟರ್’ನಲ್ಲಿ ದಾಖಲೆ ಬರೆದ ಡಿ ಬಾಸ್ ‘ಕಂಪೆನಿ’

ಬೆಂಗಳೂರು, ಅಕ್ಟೋಬರ್ 19, 2019 (www.justkannada.in): ಟ್ವಿಟ್ಟರ್ ನಲ್ಲಿ ನಟ ದರ್ಶನ್ ಬಗ್ಗೆ ಇರುವ ‘ಡಿ ಕಂಪನಿ’ ‘ಡಿ ಕಂಪನಿ 1 ಲಕ್ಷಕ್ಕೂ ಫಾಲೋವರ್ಸ್ ಪಡೆದುಕೊಂಡಿದೆ.

ಟ್ವಿಟ್ಟರ್ ನಲ್ಲಿ ಈ ಮಟ್ಟಿಗೆ ಹಿಂಬಾಲಕರನ್ನು ಹೊಂದಿರುವ ಮೊದಲ ಫ್ಯಾನ್ ಪೇಜ್ ಇದಾಗಿದೆ. ಸತತ 9 ವರ್ಷಗಳಿಂದ ಪ್ರತಿ ದಿನವೂ ಈ ಪೇಜ್ ಮೂಲಕ ದರ್ಶನ್ ಕುರಿತಾದ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿದೆ.

‘ಡಿ ಕಂಪನಿ’ಗೆ ನಟ ದರ್ಶನ್ ಸಹ ಶುಭಾಶಯ ತಿಳಿಸಿದ್ದಾರೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದ ಎಂದಿದ್ದಾರೆ. ‘ರಾಬರ್ಟ್’ ನಿರ್ದೇಶಕ ತರುಣ್ ಸುಧೀರ್ ಕೂಡ ವಿಶ್ ಮಾಡಿದ್ದಾರೆ.