ಕಾಂಗ್ರೆಸ್ ಮುಕ್ತ ಮಾಡಿದ್ದು ದೇಶದ ದಲಿತರು ಮತ್ತು ಬಡವರು- ಜನಸಂಕಲ್ಪಯಾತ್ರೆಯಲ್ಲಿ ಸಚಿವ ಗೋವಿಂದ ಕಾರಜೋಳ ಗುಡುಗು.

ತುಮಕೂರು,ಡಿಸೆಂಬರ್,7,2022(www.justkannada.in): ಕಾಂಗ್ರೆಸ್ ಮುಕ್ತ ಮಾಡಿದ್ದು ದೇಶದ ದಲಿತರು,  ಬಡವರು. ನಮ್ಮ ಸಮುದಾಯ ತಿರಸ್ಕರಿಸಿದ್ದಕ್ಕೆ ಕಾಂಗ್ರೆಸ್ ಮೂಲೆ ಗುಂಪಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ನಡೆದ ಜನಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ,  ಡಾ.ಬಿ.ಆರ್ ಅಂಬೇಡ್ಕರ್ ಗೆ ಭಾರತ ರತ್ನ ನೀಡಿದ್ದು ಬಿಜೆಪಿ ಅವಧಿಯಲ್ಲಿ ನಮ್ಮ ನಾಯಕ ಸಿಎಂ ಬಸವರಾಜ ಬೊಮ್ಮಾಯಿ ಹೆಚ್ಚಿನ ಕಳಕಳಿ ಹೊಂದಿದ್ದಾರೆ.  11,133 ಪೌರಕಾರ್ಮಿಕರನ್ನ ಸರ್ಕಾರಿ ನೌಕರರೆಂದು ಕರೆದಿದ್ದಾರೆ. ಇನ್ನುಳಿದ ಪೌರಕಾರ್ಮಿಕರಿಗೆ ನ್ಯಾಯ ಒದಗಿಸಲು ಸಿಎಂ ಬೊಮ್ಮಾಯಿ ಹಂಬಲಿಸುತ್ತಿದ್ದಾರೆ ಎಂದರು.

ಹಾಗೆಯೇ  ಕಾಂಗ್ರೆಸ್ ನವರು ರಾಹುಲ್ ಗಾಂಧಿ ಕರೆಸಿ ಮತ ಕೇಳುತ್ತಿದ್ದಾರೆ.  ನಮ್ಮ ಸಮುದಾಯ ತಿರಸ್ಕರಿಸಿದ್ದಕೆ ಕಾಂಗ್ರೆಸ್ ಮೂಲೆ ಗುಂಪಾಗಿದೆ  ಎಂದು ಲೇವಡಿ ಮಾಡಿದರು.

Key words:  Dalits – poor – Congress-Minister -Govinda Karajola