Wednesday, September 30, 2026

BDA Apartments

ಇದೊಂದು ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ- ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ… BDA JK_Adv ...
Home Front Page ಇದೊಂದು ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ- ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ…

ಇದೊಂದು ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ- ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ…

ಬೆಂಗಳೂರು,ಫೆಬ್ರವರಿ,3,2021(www.justkannada.in): ರಾಜ್ಯ ಸರ್ಕಾರ ಇನ್ನು ಟೇಕಾಫ್ ಆಗಿಲ್ಲ. ಇದೊಂದು ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದರು.jk

ವಿಧಾನಸಭೆ ಕಲಾಪದಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸರ್ಕಾರ ರಸ್ತೆಯಲ್ಲಿ ಕೆಟ್ಟು ನಿಂತಿರುವ ಬಸ್ ನಂತಾಗಿದೆ. ಡಕೋಟಾ ಎಕ್ಸ್ ಪ್ರೆಸ್ ತರ.  ನಾಲ್ಕೈದು ಕಡೆ ಬಸ್ ಹಿಡಿದು ಎಳೆದಾಡುತ್ತಿದ್ದಾರೆ. ಹೀಗಾಗಿ ಡಕೋಟಾ ಎಕ್ಸ್ ಪ್ರೆಸ್ ಹೇಗೆ ಮುಂದಕ್ಕೆ ಹೋಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

Rastrapitha-Mahatma Gandhi- Remembrance- Former CM- Siddaramaiah
siddaramaih#profile..

ರಾಜ್ಯಪಾಲರ ಭಾಷಣ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಇದು ಜನರಿಂದ ಆಯ್ಕೆಯಾಗಿ ಬಂದಿರುವ ಸರ್ಕಾರ ಅಲ್ಲ. ರಾಜ್ಯಪಾಲರ ಮೂಲಕ ಬಿಜೆಪಿ ಸರ್ಕಾರ ಸುಳ್ಳು ಹೇಳಿಸಿದೆ. ರಾಜ್ಯಪಾಲರನ್ನ ಬಳಸಿ ಸುಳ್ಳು ಹೇಳಿಸಿದ್ದಾರೆ. ಭಾಷಣದಲ್ಲಿ ಮುನ್ನೋಟವೂ ಇಲ್ಲ. ಹಿನ್ನೋಟವೂ ಇಲ್ಲ. ಯೋಜನೆಗಳ ಬಗ್ಗೆ ಸರ್ಕಾರ ವಸ್ತುಸ್ಥಿತಿ ಹೇಳಬೇಕು ಎಂದು ಕಿಡಿಕಾರಿದರು.

Key words: Dakota Express- government-Former CM- Siddaramaiah- criticized.