ಬೆಂಗಳೂರು,ಆಗಸ್ಟ್,23,2025 (www.justkannada.in): ಧರ್ಮಸ್ಥಳ ಪ್ರಕರಣ ಸಂಬಂಧ ಬಿಜೆಪಿಯವರು ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಮಂಜುನಾಥಸ್ವಾಮಿಯೇ ಅವರಿಗೆ ಶಿಕ್ಷೆ ಕೊಡುತ್ತಾನೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದರು.
ಮಾಸ್ಕ್ ಮ್ಯಾನ್ ಬಂಧನ ವಿಚಾರ ಕುರಿತು ಮಾತನಾಡಿದ ಡಿಕೆ ಸುರೇಶ್, ಆತ ಯಾರು ಅಂತಾ ಗೊತ್ತಿಲ್ಲ. ನಮಗೆ ಮಂಜುನಾಥ ಸ್ವಾಮಿ ಮುಖ್ಯ. ಕಳಂಕದಿಂದ ಆಚೆ ಬರುತ್ತೇವೆ. ಶಕ್ತಿಯನ್ನು ಭಗವಂತ ಕೊಟ್ಟಿದ್ದಾನೆ ಬಿಜೆಪಿಯವರಿಗೆ ಹೊಟ್ಟೆ ಉರಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರು ಧರ್ಮದ ಮೇಲೆ ರಾಜಕಾರಣ ಮಾಡುತ್ತಾರೆ
ವೋಟ್ ಗಾಗಿ ಅವರು ಏನನ್ನಾದರೂ ಬಳಸಿಕೊಳ್ಳುತ್ತಾರೆ. ಏನದ್ರೂ ಮಾಡುತ್ತಾರೆ. ತನಿಖೆ ಆಗಿರುವುದರಿಂದ ಕಳಂಕದಿಂದ ಹೊರಬಂದಿದ್ದೇವ. ಬಿಜೆಪಿಯವರಿಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡ್ತಾನೆ ಎಂದು ಡಿ.ಕೆ ಸುರೇಶ್ ತಿಳಿಸಿದರು.
Key words: BJP, politics, religion, D.K. Suresh