ಬೆಂಗಳೂರಿಗೆ ಡಿ.11 ರಂದು ‘ಜೈ ಭೀಮ್’ ನ್ಯಾಯಮೂರ್ತಿ.

ಬೆಂಗಳೂರು,ಡಿಸೆಂಬರ್,7,2021(www.justkannada.in): ನ್ಯಾ. ಎಚ್.ಎನ್ ನಾಗಮೋಹನ ದಾಸ್ ಅವರ ಮಾನವ ಹಕ್ಕುಗಳು ಎಂಬ  ಪುಸ್ತಕ ಬಿಡುಗಡೆ ಸಮಾರಂಭವನ್ನ ಡಿಸೆಂಬರ್ 11ಕ್ಕೆ ಆಯೋಜಿಸಲಾಗಿದೆ.

ಡಿಸೆಂಬರ್ 11 ರ ಬೆಳಿಗ್ಗೆ 11-00 ಗಂಟೆಗೆ  ನಗರದ ಗಾಂಧಿ ಭವನದಲ್ಲಿರುವ ಬಾಪೂಜಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ‘ಜೈ ಭೀಮ್’ ಚಿತ್ರದ ಮೂಲ ಕಥಾ ನಾಯಕರಾದ ನ್ಯಾಯಮೂರ್ತಿ ಕೆ. ಚಂದ್ರು ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಸಮಾರಂಭದಲ್ಲಿ ಅತಿಥಿಗಳಾಗಿ ಖ್ಯಾತ ಸಾಹಿತಿಗಳೂ, ಹೋರಾಟಗಾರರು ಮತ್ತು ರಾಜ್ಯದ ಮಾಜಿ ಸಚಿವರಾಗಿದ್ದ ಬಿ. ಟಿ. ಲಲಿತಾ ನಾಯಕ್ ಮತ್ತು ಅಖಿಲ ಭಾರತ ವಕೀಲರ ಸಂಘದ ರಾಜ್ಯ ಸಮಿತಿಯ ಅಧ್ಯಕ್ಷರಾದ ಎಸ್. ಶಂಕರಪ್ಪ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್ , ಗೋಪಾಲಕೃಷ್ಣ ಹರಳಹಳ್ಳಿ ಜನಪ್ರಕಾಶನದ ಬಿ.ರಾಜಶೇಖರಮೂರ್ತಿಯವರು ಉಪಸ್ಥಿತರಿರಲಿದ್ದಾರೆ.

Key w words: D. Human Rights -Book Release -HN -Nagamohan Das-bangalore