ಸಿಲಿಂಡರ್ ಸ್ಪೋಟ: ಮೂವರು ಬಾಲಕರಿಗೆ ಗಂಭೀರ ಗಾಯ…

ಬೆಂಗಳೂರು, ನವೆಂಬರ್,17,2020(www.justkannada.in):  ಸಿಲಿಂಡರ್ ಸ್ಪೋಟಗೊಂಡು ಮೂವರು ಬಾಲಕರು ಗಂಭೀರ ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.kannada-journalist-media-fourth-estate-under-loss

ಮಾಗಡಿ ಪಟ್ಟಣದ ರಾಜೀವ್ ಗಾಂಧಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ದರ್ಶನ್(18), ಕಿಶೋರ್(14), ಚಂದ್ರ(14) ಗಂಭೀರ ಗಾಯಗೊಂಡ ಬಾಲಕರು. ಮೂವರು ಬಾಲಕರು ಮಧ್ಯಾಹ್ನ ಅಡುಗೆ ಮಾಡಲು ಹೋದ ವೇಳೆ ಸಿಲಿಂಡರ್ ಸ್ಪೋಟಗೊಂಡು ಈ ದುರ್ಘಟನೆ ಸಂಭವಿಸಿದೆ.cylinder-explosion-three-boy-serious-injuries-magadi

ಗಾಯಗೊಂಡ ಮೂವರು ಬಾಲಕರನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Cylinder –explosion-Three –boy-serious –injuries- magadi