ಸಿಲಿಂಡರ್ ಸ್ಫೋಟ: ಮನೆಯಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರು

ಮೈಸೂರು,ಜುಲೈ,5,2025 (www.justkannada.in): ಮನೆಯ ಸಿಲಿಂಡರ್ ಸ್ಫೋಟಗೊಂಡ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವಡ್ಡರಗುಡಿಯಲ್ಲಿ ನಡೆದಿದ್ದು, ಸದ್ಯ ಪ್ರಾಣಾಪಾಯದಿಂದ ಅತ್ತೆ, ಸೊಸೆ ಪಾರಾಗಿದ್ದಾರೆ.

ಅತ್ತೆ ಈರಮ್ಮ, ಸೊಸೆ ಶಾಂತಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಂತಲ ಆಶಾ ಕಾರ್ಯಕರ್ತೆಯಾಗಿದ್ದು, ಸಿಲಿಂಡರ್ ಸ್ಪೋಟದ ತೀವ್ರತೆಗೆ ಮನೆಯಲ್ಲಿದ್ದ ವಸ್ತುಗಳು, ಚಿನ್ನಾಭರಣ ಸುಟ್ಟು ಕರಕಲಾಗಿವೆ

20 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ‌ ಬೆಂಕಿ ನಂದಿಸುವ ಕಾರ್ಯ ನಡೆಯಿತು.vtu

Key words: Cylinder, explosion, House, Mysore