ಬೆಂಗಳೂರಿನಲ್ಲಿ ಸಿಲಿಂಡರ್​ ಸ್ಫೋಟ:  ಐವರಿಗೆ ಗಾಯ.

ಬೆಂಗಳೂರು,ನವೆಂಬರ್,22,2023(www.justkannada.in): ಅಡುಗೆ ಅನಿಲ ಸೊರಿಕೆಯಾಗಿ ಸಿಲಿಂಡರ್​ ಸ್ಫೋಟಗೊಂಡು ಐವರು ಗಾಯಗೊಂಢಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ನಗರದ ವೀವರ್ಸ್ ಕಾಲೋನಿ ಬಳಿಯ ಮಾರುತಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮಾರ್ಟಿನ್ ಎಂಬುವವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಈ ಅವಘಡ ಸಂಭವಿಸಿದೆ.  ಉತ್ತರ ಪ್ರದೇಶದ ವಾರಾಣಸಿ ಮೂಲದ ಜಮಾಲ್, ನಾಜಿಯಾ, ಇರ್ಫಾನ್, ಗುಲಾಬ್, ಶಹಜಾದ್​ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಂಜಾನೆ 5.30ರ ಸುಮಾರಿಗೆ ಸಿಲಿಂಡರ್​ ಸೋರಿಕೆಯಾಗಿ ಸ್ಫೋಟವಾಗಿದೆ. ಸಿಲಿಂಡರ್ ಸ್ಫೋಟಗೊಂಡ ತೀವ್ರತೆಗೆ ಮನೆಯ ಕಿಟಕಿಗಳು ಛಿದ್ರವಾಗಿವೆ. ಮನೆಯ ಮುಂಭಾಗವಿದ್ದ ಕಾರಿನ ಗಾಜು ಕೂಡ ಪುಡಿಪುಡಿಯಾಗಿದೆ.

Key words: Cylinder- blast – Bangalore- Five- injured