ಮೈಚಾಂಗ್ ಚಂಡಮಾರುತ ಎಫೆಕ್ಟ್: ವಿವಿಧೆಡೆ ಭಾರಿ ಮಳೆ ಸಾಧ್ಯತೆ

ಬೆಂಗಳೂರು, ಡಿಸೆಂಬರ್ 04, 2023 (www.justkannada.in): ಮೈಚಾಂಗ್ ಚಂಡಮಾರುತ ಚಂಡಮಾರುತ ಕರಾವಳಿ ತೀರಕ್ಕೆ ಸಮೀಪಿಸುತ್ತಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.

ಚೆನ್ನೈ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾರಿ ಸಾಧ್ಯತೆ ಇದೆ. ಈ ಸ್ಥಳಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಗುಡುಗು ಮತ್ತು ಮಿಂಚಿನ ಮಳೆಯಾಗುವ ಎಚ್ಚರಿಕೆ ನೀಡಿದ್ದಾರೆ.

ಸೈಕ್ಲೋನಿಕ್ ಚಂಡಮಾರುತ ಮೈಚಾಂಗ್ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಡಿಸೆಂಬರ್ 5 ರ ಪೂರ್ವಾಹ್ನದ ಸಮಯದಲ್ಲಿ ದಾಟುವ ಸಾಧ್ಯತೆಯಿದೆ. ಗರಿಷ್ಠ ನಿರಂತರ ಗಾಳಿಯ ವೇಗ ಗಂಟೆಗೆ 80-90 ಕಿಮೀ ಗಂಟೆಗೆ 100 ಕಿಮೀ ವರೆಗೆ ಇರುತ್ತದೆ ಎಂದು ಐಎಂಡಿ  ತಿಳಿಸಿದೆ.