ಬಿಜೆಪಿ ನಾಯಕರಿಂದ ಸೈಕಲ್ ಜಾಥಾ: ಮಾಡಲಿ ಆರೋಗ್ಯಕ್ಕೆ ಒಳ್ಳೆಯದು- ಸಚಿವ ಎಂ.ಬಿ ಪಾಟೀಲ್ ಲೇವಡಿ

ವಿಜಯಪುರ,ಜೂನ್,20,2024 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ನಾಯಕರು ಸೈಕಲ್ ಜಾಥಾ ನಡೆಸಿದ್ದು ಈ ಬಗ್ಗೆ ಸಚಿವ ಎಂ.ಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಬಿಜೆಪಿ ನಾಯಕರು ಸೈಕಲ್ ಜಾಥಾ ಮಾಡಿದ್ದಾರೆ ಮಾಡಲಿ ಆರೋಗ್ಯಕ್ಕೆ ಒಳ್ಳೆಯದು ಎಂದು ಲೇವಡಿ ಮಾಡಿದ್ದಾರೆ.

ಮೋದಿಯವರು ತೈಲಬೆಲೆಯನ್ನ 38 ರೂ.  ಏರಿಸಿದಾಗ ಯಾಕೆ ಮಾತನಾಡಲಿಲ್ಲ.  ಆಗ ಯಾಕೆ ಬಿಜೆಪಿ ಪ್ರತಿಭಟನೆ ಮಾಡಲಿಲ್ಲ. ಬಿಜೆಪಿ ನಾಯಕರಿಗೆ ಮೋದಿ ಮುಂದೆ ಮಾತಾನಾಡೋ  ಧೈರ್ಯ ಇರಲಿಲ್ಲ ಎಂದು ಸಚಿವ ಎಂಬಿ ಪಾಟಿಲ್ ಕಿಡಿಕಾರಿದರು.

Key words: Cycle jatha, BJP leader, Minister, MB Patil