ಮೈಸೂರು, ಸೆಪ್ಟೆಂಬರ್, 16, 2025 (www.justkannada.in): ಮೈಸೂರಿನಲ್ಲಿ ಸೈಬರ್ ವಂಚನೆಗೆ ರೂ. 28 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಮೈಸೂರು ಸೈಬರ್ ಕ್ರೈಮ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಸ್ನೇಹಾ ರಾಜ್ ಎನ್ ಹೇಳಿದರು.
ಬಜಾಜ್ ಫೈನಾನ್ಸ್ ಲಿಮಿಟೆಡ್, ಡಿಜಿಟಲ್ ಬಳಕೆದಾರರಿಗೆ ವಿವಿಧ ರೀತಿಯ ಬೆದರಿಕೆಗಳು ಮತ್ತು ಹಣಕಾಸು ಸಂರಕ್ಷಿಸಲು ಉತ್ತಮ ಅಭ್ಯಾಸಗಳ ಬಗ್ಗೆ ತಿಳಿಸುವ ಉದ್ದೇಶದಿಂದ ನಗರದ ಹೋಟೆಲ್ ಸಂದೇಶ್ ದಿ ದಿ ಪ್ರಿನ್ಸ್ ನಲ್ಲಿ ‘ನಾಕೌಟ್ ಡಿಜಿಟಲ್ ಫ್ರಾಡ್’ ಸೈಬರ್ ವಂಚನೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತುಮೈಸೂರು ಸೈಬರ್ ಕ್ರೈಮ್ ವಿಭಾಗದ ಎಸಿಪಿ ಸ್ನೇಹಾ ರಾಜ್ ಎನ್ , ನಿವೃತ್ತ ಎಸಿಪಿ ಜಿ.ಎನ್. ಮೋಹನ್ ಮತ್ತು ನಿವೃತ್ತ ಡಿವೈಎಸ್ಪಿ ರಮೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ವಿವಿಧ ರೀತಿಯ ವಂಚನೆಗಳ ಬಗ್ಗೆ ಅಧಿಕಾರಿಗಳು ಬೆಳಕು ಚೆಲ್ಲಿದರು. ನಕಲಿ ಒಟಿಪಿ ವಂಚನೆ, ಫಿಶಿಂಗ್ ವಂಚನೆ, ಡಿಜಿಟಲ್ ಬಂಧನ, ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ ಮೆಂಟ್ ವಂಚನೆ, ಪಿಂಚಣಿ ವಂಚನೆ ಮತ್ತು ಇತರ ವಂಚನೆಗಳ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸಿಪಿ ಸ್ನೇಹಾ ರಾಜ್, ಮೈಸೂರಿನಲ್ಲಿ ಸೈಬರ್ ವಂಚನೆ ವೇಗವಾಗಿ ಹೆಚ್ಚುತ್ತಿದೆ, ವಂಚನೆಗೊಳದವರು ಇದರಿಂದ ಹೊರಬರಲು ಕಷ್ಟಪಡುತ್ತಿದ್ದಾರೆ” “2025 ರಲ್ಲಿ ಮಾತ್ರವೇ ವರದಿಯಾದ 128 ಪ್ರಕರಣಗಳಿಂದ ರೂ. 28 ಕೋಟಿಗೂ ಹೆಚ್ಚು ಹಣವನ್ನು ವಂಚಕರು ದೋಚಿದ್ದಾರೆ, ಆದರೆ ರಿಕವರಿ ಪ್ರಯತ್ನಗಳಿಂದ ಕೇವಲ ರೂ. 3 ಕೋಟಿ ಮಾತ್ರ ಹಿಂಪಡೆಯಲು ಸಾಧ್ಯವಾಗಿದೆ” ಎಂದು ಮಾಹಿತಿ ನೀಡಿದರು.
ಸೈಬರ್ ಜಾಗೃತಿಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಎಸಿಪಿ ಸ್ನೇಹಾ ರಾಜ್ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಎರಡು ಪ್ರಕರಣಗಳ ಬಗ್ಗೆ ಹಂಚಿಕೊಂಡರು – ಒಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು ರೂ 3 ಕೋಟಿ ಕಳೆದುಕೊಂಡರು. ಮತ್ತೊಂದು ಪ್ರಕರಣದಲ್ಲಿ ಹೂಡಿಕೆ ಹೆಸರಲ್ಲಿ ಮಹಿಳೆಯೊಬ್ಬರು ರೂ. 35 ಲಕ್ಷ ಕಳೆದುಕೊಂಡಿದ್ದಾರೆ. ಸಾರ್ವಜನಿಕ ಜಾಗೃತಿಯ ಜೊತೆಗೆ ಪ್ರಕರಣ ನಡೆದ ತಕ್ಷಣವೇ ಪೋಲೀಸರ ಗಮನಕ್ಕೆ ತರುವುದು ಅತ್ಯಗತ್ಯ ಎಂದು ವಿವರಿಸಿದರು.
“ಸೈಬರ್ ವಂಚನೆಯ ಬಗ್ಗೆ ನಾಗರಿಕರು ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡುವ ಮೂಲಕ ತಕ್ಷಣ ವರದಿ ಮಾಡಬೇಕು. ತ್ವರಿತ ಕ್ರಮವು ವಂಚನೆಯ ವಹಿವಾಟುಗಳನ್ನು ಸ್ಥಗಿತಗೊಳಿಸಲು ಮತ್ತು ಅಪರಾಧಿಗಳನ್ನು ಬೆನ್ನಟ್ಟಲು ನಮಗೆ ಅನುವು ಮಾಡಿಕೊಡುತ್ತದೆ. ಈ ಹೆಚ್ಚುತ್ತಿರುವ ವಂಚನೆಗೆ ಸಾರ್ವಜನಿಕ ಜಾಗೃತಿಯೊಂದೇ ಶಕ್ತಿಶಾಲಿ ಅಸ್ತ್ರ” ಎಂದು ಹೇಳಿದರು.
ಬಿಎಫ್‍ಎಲ್ ನ ವಕ್ತಾರ ವೆಂಕಟೇಶನ್ ವಿಎಸ್ ಮಾತನಾಡಿ ಭಾರತೀಯ ರಿಸರ್ವ್ ಬ್ಯಾಂಕ್‍ನ 2024ರ ವಂಚನೆ, ಅಪಾಯ ನಿರ್ವಹಣೆ ಕುರಿತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ಇವರುವ ಮಾರ್ಗಸೂಚಿಯಂತೆ ನಾಕೌಟ್ ಡಿಜಿಟಲ್ ಫ್ರಾಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತು ನಾಗರಿಕರೊಂದಿಗೆ ನೆಲದ ಸಂವಹನಗಳ ಮೂಲಕ ನಿರಂತರವಾಗಿ ಆನ್‍ಲೈನ್ ಮತ್ತು ಆಫ್‍ಲೈನ್ ಸಲಹೆಗಳನ್ನು ನೀಡುತ್ತಿದ್ದೇವೆ, ಪ್ರತಿಯೊಬ್ಬರೂ ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರಲು ಜಾಗೃತಿ ಮೂಡಿಸುತಿದ್ದೇವೆ, ನಾಗರಿಕರು ಅನುಮಾನಾಸ್ಪದ ಇಮೇಲ್ ಗಳು, ಎಸ್‍ಎಂಎಸ್ ಗಳು, ಲಿಂಕ್ ಗಳು, ಕ್ಯೂಆರ್ ಕೋಡ್ ಗಳನ್ನು ಕ್ಲಿಕ್ ಮಾಡುವುದು ಮತ್ತು ಅಪರಿಚಿತ ಮೂಲಗಳಿಂದ ಅಪ್ಲಿಕೇಶನ್ ಗಳನ್ನು ಡೌನ್‍ಲೋಡ್ ಮಾಡುವುದನ್ನು ನಿಲ್ಲಿಸಬೇಕು. ದೇಶದ 100 ಪ್ರಮುಖ ನಗರಗಳಲ್ಲಿ ಡಿಜಿಟಲ್ ಜಾಗೃತಿ ಅಭಿಯಾನ ಕಾರ್ಯಕ್ರಮಗಳ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
Key words: Cyber fraud , Mysore, loss , Rs. 28 crore