ಪಟಾಕಿ ಸಿಡಿಸುವಾಗ ಹೊತ್ತಿ ಉರಿದ ಕುಶನ್ ಅಂಗಡಿ :  3 ಲಕ್ಷ ಮೌಲ್ಯದ ಪೀಠೋಪಕರಣ ಬೆಂಕಿಗಾಹುತಿ.

ಬೆಳಗಾವಿ,ಅಕ್ಟೋಬರ್,25,2022(www.justkannada.in):  ದೀಪಾವಳಿ ಹಬ್ಬದ ಸಂಭ್ರಮ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವ ವೇಳೆ ಬೆಂಕಿ ತಗುಲಿ ಕುಶನ್ ಅಂಗಡಿ ಹೊತ್ತಿ ಉರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಕಿತ್ತೂರು ಪಟ್ಟಣದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಶಬ್ಬೀರ್ ಬೀಡಿ (Shabbir Beedi) ಎನ್ನುವವರಿಗೆ ಸೇರಿದ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ರಸ್ತೆ ಪಕ್ಕ ಪಟಾಕಿ ಸಿಡಿಸುತ್ತಿದ್ದಾಗ, ಶಬ್ಬೀರ್ ಬೀಡಿ ಸೇರಿದ ಪೀಠೋಪರಕರಣ ಮತ್ತು ಹತ್ತಿ ಹಾಗೂ ಸೆಣಬಿನಿಂದ ತಯಾರಿಸುವ ಕುಶನ್ ಅಂಗಡಿಗೆ ಪಟಾಕಿಯ ಬೆಂಕಿ ತಗುಲಿ ಹೊತ್ತಿಕೊಂಡಿದೆ ಎನ್ನಲಾಗಿದೆ.mysore- Victims - fire - Nandi statue-Basaveshwara Temple.

ಇದರಿಂದಾಗಿ ಅಂಗಡಿಯಲ್ಲಿದ್ದ ಸುಮಾರು ಮೂರು ಲಕ್ಷ ಮೌಲ್ಯದ ಕುಶನ್ ಮತ್ತು ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

Key words:  cushion shop – firecrackers-3 lakh -worth -furniture –belgavi