ಮೈಸೂರಿನಲ್ಲಿ ಇಂದಿನಿಂದ ರಾತ್ರಿ 9ರಿಂದ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿ…

ಮೈಸೂರು,ಜು,22,2020(www.justkannada.in):  ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಸಂಜೆ 6 ರಿಂದ ಬೆಳಿಗ್ಗೆ 5 ಗಂಟೆವರೆಗೆ ವಿಧಿಸಲಾಗಿದ ಕರ್ಫ್ಯೂವನ್ನ ಮಾರ್ಪಾಡಿಸಲಾಗಿದೆ. Curfew –Mysore- today - 9 pm- Ordered - Police Commissioner -Dr. Chandragupta.

ಇಂದಿನಿಂದ ಮೈಸೂರಿನಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ ಅವಧಿ ಜಾರಿ ಮಾಡಿ ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ರಾತ್ರಿ 9 ರವರೆಗೆ ಓಪನ್ ಇರಲಿದ್ದು, ರಾತ್ರಿ 9 ರವರೆಗೆ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಿ ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಸಂಜೆ 6 ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಅವಧಿ ಜಾರಿಯಲ್ಲಿತ್ತು. ಇದೀಗ ಇಂದಿನಿಂದ ರಾತ್ರಿ 9 ರವರೆಗೆ ವಾಣಿಜ್ಯ ಚಟುವಟಿಕೆ ವಿಸ್ತರಣೆ  ಮಾಡಲಾಗಿದ್ದು, ರಸ್ತೆ ಬದಿ ಟೀ ಅಂಗಡಿಗಳಿಗೆ ನಿರ್ಬಂಧ ಮುಂದುವರಿಯಲಿದೆ. ರಾತ್ರಿ 9ರಿಂದ ಬೆಳಗ್ಗೆ 5ರ ವರೆಗೆ ತುರ್ತು ಹಾಗೂ ಅಗತ್ಯ ಸೇವೆಗಳ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ಬಂದ್ ಆಗಲಿದೆ.

Key words: Curfew –Mysore- today – 9 pm- Ordered – Police Commissioner -Dr. Chandragupta.