ಕರ್ಫ್ಯೂ, ಲಾಕ್ ಡೌನ್ ಮಾಡಿದ್ರೆ ಶೇ.50ರಷ್ಟು ಕೈಗಾರಿಗಳು ಅಸ್ತಿತ್ವ ಕಳೆದುಕೊಳ್ಳಲಿದೆ- ಮೈಸೂರು ಜಿಲ್ಲಾ ಕೈಗಾರಿಕಾ ಒಕ್ಕೂಟದ ಸುರೇಶ್ ಕುಮಾರ್ ಜೈನ್.

ಮೈಸೂರು,ಜನವರಿ,18,2022(www.justkannada.in): ಈ ಬಾರಿಯೂ ಕರ್ಫ್ಯೂ, ಲಾಕ್ ಡೌನ್ ಮಾಡಿದ್ರೆ ಶೇ.50ರಷ್ಟು ಕೈಗಾರಿಗಳು ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಮೈಸೂರು ಜಿಲ್ಲಾ ಕೈಗಾರಿಕಾ ಒಕ್ಕೂಟದ ಸುರೇಶ್ ಕುಮಾರ್ ಜೈನ್ ಅಳಲು ತೋಡಿಕೊಂಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಮೈಸೂರಿನ ಕೈಗಾರಿಕೆಗಳನ್ನು ಕರೋನಾ 3ನೇ ಅಲೆ ಬಿಡದೆ ಕಾಡುತ್ತಿದೆ.  ಕೋವಿಡ್ ಲಾಕ್ಡೌನ್ ನಿಂದ ಶೇ.20ರಷ್ಟು ಕೈಗಾರಿಕೆಗಳು ಮುಚ್ಚಿಹೋಗಿದೆ. ವಿವಿಧ ಹಂತದ ಉದ್ಯಮಗಳ ಮುಖ್ಯಸ್ಥರು ಕೂಡ ವೀಕೆಂಡ್ ಕರ್ಫ್ಯೂ ಲಾಕ್ ಡೌನ್ ಗಳಿಗೆ ನೋ ಅಂದಿದ್ದಾರೆ. ಜಿಲ್ಲೆಯಲ್ಲಿ 26 ಸಾವಿರ ಸಣ್ಣ ಕೈಗಾರಿಕೆಗಳಿದ್ದು, 150ಕ್ಕೂ ಹೆಚ್ಚು ಬೃಹತ್ ಕೈಗಾರಿಕೆಗಳಿದ್ದು ಹಾಗೂ 130ಕ್ಕೂ ಹೆಚ್ಚು ರಫ್ತು ಕೈಗಾರಿಕೆಗಳಿವೆ. ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗುತ್ತಾರೆ.

ಕಳೆದೆರಡು ಕೋವಿಡ್ ಅಲೆಯಲ್ಲಿ ನಷ್ಟ ಅನುಭವಿಸಿರುವ ಉದ್ಯಮಗಳಿಗೆ ಸರ್ಕಾರಗಳ ನೆರವು ಇನ್ನು ಸಿಕ್ಕಿಲ್ಲ. 20ಲಕ್ಷ ಕೋಟಿಯ ಪ್ಯಾಕೇಜ್ ನಿಂದ ಕೊಡಲು ನಿರ್ಧರಿಸಿದ್ದ ಸಾಲವೂ ಗಗನ ಕುಸುಮ. ಇಷ್ಟೆಲ್ಲ ಇದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯುತ್ ಬೆಲೆ ಏರಿಕೆ ಶಾಕ್ ನೀಡಿದೆ. ಆರ್ಥಿಕ ಮುಗ್ಗಟ್ಟು ಎದುರಿಸಿರುವ ಉದ್ಯಮಿಗಳು ಈಗ ಸರ್ಕಾರದ ಕಠಿಣ ನೀತಿಗಳಿಗೆ ಧಿಕ್ಕಾರ ಹೇಳಿದ್ದಾರೆ. ಕೈಗಾರಿಕೋದ್ಯಮಿಗಳ ಅಳಲು ಕೇಳಬೇಕಿದ್ದ ಕೈಗಾರಿಕಾ ಸಚಿವರು ಕೈಗಾರಿಕಾ ಅದಾಲತ್ ನಡೆಸದೆ ಉದ್ಯಮಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಸುರೇಶ್ ಕುಮಾರ್ ಜೈನ್ ಬೇಸರ ವ್ಯಕ್ತಪಡಿಸಿದರು.

Key words: Curfew-lockdown -lose 50% – industry-Suresh Kumar