Wednesday, October 7, 2026

BDA Apartments

immense respect BDA JK_Adv BDA Adv
Home Front Page ಕೊರೋನಾದಿಂದ ನಾನು ಗುಣಮುಖ: ನಿಮ್ಮ ಪ್ರೀತಿಗೆ ಸದಾ ಋಣಿ- ಸಚಿವ ಎಸ್.ಟಿ ಸೋಮಶೇಖರ್…

ಕೊರೋನಾದಿಂದ ನಾನು ಗುಣಮುಖ: ನಿಮ್ಮ ಪ್ರೀತಿಗೆ ಸದಾ ಋಣಿ- ಸಚಿವ ಎಸ್.ಟಿ ಸೋಮಶೇಖರ್…

ಬೆಂಗಳೂರು,ಆ,10,2020(www.justkannada.in):  ನಾನು ಕೊರೋನಾದಿಂದ ಗುಣಮುಖನಾಗಿದ್ದು, ಪರೀಕ್ಷಾ ವರದಿ ಬಂದಿದ್ದು, ನೆಗಟಿವ್ ಎಂದು ಬಂದಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ. jk-logo-justkannada-logo

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವ ಎಸ್.ಟಿ ಸೋ,ಮಶೇಖರ್,  ವಿಶ್ವವನ್ನೇ ಕಾಡುತ್ತಿರುವ ಕೋವಿಡ್ – 19 ಮಹಾಮಾರಿಯು ಎ ಸಿಂಪ್ಟಮ್ಯಾಟಿಕ್ ರೂಪದಲ್ಲಿ ನನಗೂ ಅಂಟಿಕೊಂಡಿದ್ದ ಹಿನ್ನೆಲೆಯಲ್ಲಿ ಕಳೆದ 14 ದಿನಗಳಿಂದ ಕ್ವಾರಂಟೈನ್ ನಲ್ಲಿರಬೇಕಾಯಿತು. ಇದೇ ವೇಳೆ ನನ್ನ ಪುತ್ರ ನಿಶಾಂತ್ ಸೋಮಶೇಖರ್ ಗೂ ಸಹ ಸೋಂಕು ತಗುಲಿತ್ತು. ಇಬ್ಬರೂ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದು, ಪುನಃ ಇಂದು (ಸೋಮವಾರ) ಪರೀಕ್ಷೆಗೊಳಪಟ್ಟಿದ್ದೆವು. ಈಗ ಪರೀಕ್ಷಾ ವರದಿ ಬಂದಿದ್ದು, ನೆಗಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಗುಣಮುಖರಾಗಿದ್ದೇವೆ ಎಂದಿದ್ದಾರೆ.cured-corona-minister-st-somashekhar

ನನಗೆ ಕೊರೋನಾ ಸೋಂಕು ತಗುಲಿರುವ ಸುದ್ದಿ ಕೇಳಿ ಮುಖ್ಯಮಂತ್ರಿಗಳಿಂದ ಹಿಡಿದು ಅನೇಕ ಸಚಿವರು, ಶಾಸಕರು, ಆಪ್ತರು, ಹಿತೈಷಿಗಳು, ಕ್ಷೇತ್ರದ ಜನತೆ ಹಾಗೂ ರಾಜ್ಯದ ಜನತೆ ನೋವು ವ್ಯಕ್ತಪಡಿಸಿದ್ದಲ್ಲದೆ, ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದೀರಿ. ನಿಮ್ಮ ಈ ಪ್ರಾರ್ಥನೆ ಫಲವಾಗಿ ನಾನಿಂದು ಗುಣಮುಖನಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಋಣಿಯಾಗಿರುವೆ. ಮತ್ತೆ ಜನಸೇವೆಯಲ್ಲಿ ತೊಡಗಿಕೊಳ್ಳುವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Key words: cured-Corona- Minister- ST Somashekhar.