ಗೃಹಲಕ್ಷ್ಮೀ ಯೋಜನೆ ಹಣದಲ್ಲಿ ಮೋಸ ಆರೋಪ: ನ್ಯಾಯಾಂಗ ತನಿಖೆಗೆ ಸಿ.ಟಿ ರವಿ ಆಗ್ರಹ

ಬೆಳಗಾವಿ,ಡಿಸೆಂಬರ್,17,2025 (www.justkannada.in): ಗೃಹಲಕ್ಷ್ಮೀ ಯೋಜನೆಯಡಿ  ಫೆಬ್ರವರಿ, ಮಾರ್ಚ್ ತಿಂಗಳ ಹಣ ಫಲಾನುಭವಿಗಳಿಗೆ ಹಾಕಿಲ್ಲ. ಈ ಮೂಲಕ ಮಹಿಳೆಯರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿರುವ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಈ ಕುರಿತು ನ್ಯಾಯಾಂಗ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಈ ಕುರಿತು ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, ಫಲಾನುಭವಿಗಳಿಗೆ ಫೆಬ್ರವರಿ ಮಾರ್ಚ್ ತಿಂಗಳ ಹಣ ಬಂದಿಲ್ಲ ಅಂತಾ ದೂರು ಬಂದಿದೆ.  ಈ ದೂರಿನ ಸತ್ಯಾಸತ್ಯತೆ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ. ನಮ್ಮ ಶಾಸಕ ಸುಳ್ಳು ಹೇಳುತ್ತಿದ್ದಾರೋ ಅಥವಾ ಸಚಿವರು ಸುಳ್ಳು ಹೇಳುತ್ತಿದ್ದಾರೋ ಎಂಬುದು ನ್ಯಾಯಾಂಗ ತನಿಖೆಯಾದರೆ ಗೊತ್ತಾಗುತ್ತೆ ಎಂದರು.

ಎರಡು ತಿಂಗಳ ಹಣ ಕೊಟ್ಟಿದ್ರೆ ಫಲಾನುಭವಿಗಳ ಖಾತೆಗೆ ಬಂದಿದೆಯಾ ಅಥವಾ ನಕಲಿ ಖಾತೆಗೆ ಹೋಗುತ್ತಿದೆಯಾ? ತನಖೆಯಾಗಲಿ.  ಎಲ್ಲವೂ ಹೊರಗೆ ಬರಬೇಕು ಅಂದ್ರೆ ನ್ಯಾಯಾಂಗ ತನಿಖೆಯಾಗಬೇಕು ಎಂದು  ಸಿಟಿ ರವಿ ಒತ್ತಾಯಿಸಿದರು.

Key words: Grihalakshmi Yojana, funds, CT Ravi, demands, judicial investigation