ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಪಟ್ಟಕ್ಕಾಗಿ ಆರ್’ಸಿಬಿ-ಸಿಎಸ್’ಕೆ ಜುಗಲ್’ಬಂದಿ

ಬೆಂಗಳೂರು, ಏಪ್ರಿಲ್ 29, 2021 (www.justkannada.in):

14ನೇ ಸೀಸನ್ ನ ಐಪಿಎಲ್ ನ ಪಾಯಿಂಟ್ ಟೇಬಲ್‌ನಲ್ಲಿ ಪ್ರಥಮ ಸ್ಥಾನಕ್ಕಾಗಿ ಕಠಿಣ ಸ್ಪರ್ಧೆ ಏರ್ಪಟ್ಟಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಂಬರ್ ಸ್ಥಾನಕ್ಕಾಗಿ ಜುಗಲ್ ಬಂದಿ ಶುರುವಾಗಿದೆ.

ಆರ್‌ಸಿಬಿ ಈ ಹಿಂದೆ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ಈ ಸ್ಥಾನವನ್ನು ಪಡೆದಿತ್ತು. ಇದೀಗ ಮತ್ತೆ ಚೆನ್ನೈ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು 24 ಗಂಟೆಗಳ ಪೂರ್ಣಗೊಳ್ಳುವ ಮೊದಲು ಈ ಸ್ಥಾನವನ್ನು ಕಸಿದುಕೊಂಡಿದೆ.

ಎರಡೂ ತಂಡಗಳು ತಲಾ 10 ಅಂಕಗಳನ್ನು ಹೊಂದಿವೆ. ಆದರೆ ಚೆನ್ನೈನ ರನ್ ದರ ಬೆಂಗಳೂರುಗಿಂತ ಉತ್ತಮವಾಗಿರುವುದರಿಂದ ಈಗ ಅದು ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ.