ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ: ನಾಲ್ಕು ಕಡೆ ಸರ ಎಗರಿಸಿದ ಖದೀಮರು…

kannada t-shirts

ಮೈಸೂರು,ಮೇ,2,2019(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ ಶುರುವಾಗಿದ್ದು, ನಗರದ ನಾಲ್ಕು ಕಡೆ ಖದೀಮರು ಸರ ಎಗರಿಸಿರುವ ಘಟನೆ  ಇಂದು ಮುಂಜಾನೆ ನಡೆದಿದೆ.

ವಿದ್ಯಾರಣ್ಯಪುರಂನಲ್ಲಿ ಎರಡು ಕಡೆ, ಗೋಕುಲಂ,  ಇಟ್ಟಿಗೆಗೂಡಿನಲ್ಲಿ ತಲಾ ಒಂದು ಕಡೆ ಸರಗಳ್ಳರು ಸರ ದೋಚಿ ಪರಾರಿಯಾಗಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಂತರದಲ್ಲಿ ಸರಗಳ್ಳರು ಕೈಚಳಕ ತೋರಿಸಿದ್ದಾರೆ. ಕೆಂಪು ಪಲ್ಸರ್ ಬೈಕ್ ನಲ್ಲಿ ಬಂದು ಖದೀಮರು ಈ ಕೃತ್ಯವೆಸಗಿದ್ದಾರೆ.

ಜಯಲಕ್ಷ್ಮಮ್ಮ(60) ಎಂಬುವವರ 45 ಗ್ರಾಂ, ಜಯಲಕ್ಷ್ಮಿ (74) 12 ಗ್ರಾಂ ತೂಕದ ಚಿನ್ನದ ಸರವನ್ನ ದೋಚಿದ್ದಾರೆ. ಮೈಸೂರಿನ ಎನ್.ಐ.ಇ. ಕಾಲೇಜಿನ ಬ್ರಿಗೇಡ್ ಅಪಾರ್ಟ್ ಮೆಂಟ್ ಸಮೀಪ ವಾಕಿಂಗ್ ಮಾಡುವ ವೇಳೆ ಈ ಘಟನೆ ನಡೆದಿದೆ. ದಾರಿಹೋಕರನ್ನೇ ಸರಗಳ್ಳರು ಟಾರ್ಗೆಟ್ ಮಾಡುತ್ತಿದ್ದು, ಮುಂಜಾನೇ ಕೂಲ್ ವಾತಾವರಣದಲ್ಲಿ ವಾಕ್ ಮಾಡುವ ಮಂದಿಯ ಎಚ್ಚರವಹಿಸಬೇಕಿದೆ.

ಇನ್ನು ನಗರದಲ್ಲಿ ಒಂದೇ ದಿನ ನಾಲ್ಕು ಕಡೆ ಸರಗಳ್ಳತನದ ವಿಷಯದಿಂದ ಸಾಮಾನ್ಯ ಜನರು ದಂಗಾಗಿದ್ದು, ಸರಗಳ್ಳರನ್ನ ಹೆಡೆಮುರಿ ಕಟ್ಟಲು ಪೊಲೀಸರು ಮೈಸೂರು ನಗರದಲ್ಲಿ ನಾಕಾಬಂಧಿ ಹಾಕಿ ಶೋಧಕಾರ್ಯ ನಡೆಸುತ್ತಿದ್ದಾರೆ.

Key words:  cultural city –Mysore- Snatching- Chain-four- sides,

website developers in mysore