ಕ್ರಿಕೆಟಿಗ ರಾಹುಲ್- ಅಥಿಯಾ ಮದುವೆಗೆ ಕೂಡಿ ಬಂತು ಕಾಲ !

ಬೆಂಗಳೂರು, ಜುಲೈ 13, 2022 (www.justkannada.in): ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ಮದುವೆಗೆ ಮುಹೂರ್ತ ಕೂಡಿ ಬಂದಿದೆ ಎಂಬ ಸುದ್ದಿ ಹೊರಬಿದ್ದಿದೆ.

ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಮದುವೆಯಾಗುವ ಹುಡುಗಿ ಯಾರು ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ.

ರಾಹುಲ್ ಮತ್ತು ಅಥಿಯಾ ಒಬ್ಬರಿಗೊಬ್ಬರು ಪ್ರೀತಿಸುತ್ತಾ ಇರೋದು ಎಲ್ಲರಿಗೂ ಗೊತ್ತಿದೆ. ಯಾವಾಗ ಈ ಜೋರಿ ಹಸೆಮಣೆ ತುಳಿಯಲಿದ್ದಾರೆ ಎಂದು ಅಭಿಮಾನಿಗಳು ಕೇಳುತ್ತಿದ್ದರು. ಆದರೀಗ ಆ ಪ್ರಶ್ನೆಗೆ ಉತ್ತರ ಸಿಗುವ ಕಾಲ ಕೂಡಿ ಬಂದಿದೆ.

ಅಂದಹಾಗೆ ಇತ್ತೀಚಿಗಷ್ಟೇ ಕೆಎಲ್ ರಾಹುಲ್ ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ರಾಹುಲ್ ಪ್ರೇಯಸಿ ಅಥಿಯಾ ಶೆಟ್ಟಿ ಖುದ್ದು ಮುಂದೆ ನಿಂತು ರಾಹುಲ್ ಆರೈಕೆ ಮಾಡಿದ್ದರು.

ಮೂಲಗಳ ಪ್ರಕಾರ ಇನ್ನು ಮೂರು ತಿಂಗಳ ಒಳಗೆ ರಾಹುಲ್, ಅಥಿಯಾ ಹಸೆಮಣೆ ಏರುವುದು ಪಕ್ಕಾ ಆಗಿದೆ. ವಿವಾಹದ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎನ್ನಲಾಗಿದೆ.