ವಿಶ್ವಕಪ್ ಕ್ರಿಕೆಟ್: ಸೂಪರ್ ಸಂಡೇ ಪಂದ್ಯದಲ್ಲಿ ಆಸಿಸ್-ಟೀಂ ಇಂಡಿಯಾ ಫೈಟ್

ಬೆಂಗಳೂರು, ಅಕ್ಟೋಬರ್ 08, 2023 (www.justkannada.in): ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಟೀಂ ಇಂಡಿಯಾ ಪ್ರಬಲ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಏಕದಿನ ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮಣಿಸಿದ್ದ ಭಾರತ ಗೆಲುವಿನ ಆತ್ಮವಿಶ್ವಾಸದಿಂದಲೇ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಶುಭಮನ್​ ಗಿಲ್ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಇವರ ಇಶಾನ್​ ಕಿಶನ್​ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಶ್​ ಅಯ್ಯರ್​ ಆಡಲಿದ್ದಾರೆ.

ಫಾರ್ಮ್​ನಲ್ಲಿರುವ ಕನ್ನಡಿಗ ಕೆ.ಎಲ್​ ರಾಹುಲ್​ ಕೀಪಿಂಗ್​ ಹೊಣೆ ಹೊರಲಿದ್ದಾರೆ. ಅವರು 5ನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡುವ ಸಾಧ್ಯತೆ ಇದೆ.

ಅಕ್ಷರ್​ ಪಟೇಲ್​ ಗಾಯಗೊಂಡು ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಕಾರಣ ತಂಡದಲ್ಲಿ ಅವಕಾಶ ಪಡೆದ ಆರ್​.ಅಶ್ವಿನ್​ ಈ ಪಂದ್ಯದಲ್ಲಿ ಆಡುವುದು ಖಚಿತ ಎನ್ನಲಾಗಿದೆ.