ಕ್ರಿಕೆಟ್: ಟೀಂ ಇಂಡಿಯಾ-ಆಸ್ಟ್ರೇಲಿಯಾ 2ನೇ ಟಿ-20 ಪಂದ್ಯ ಇಂದು

ಬೆಂಗಳೂರು, ನವೆಂಬರ್ 26, 2023 (www.justkannada.in): ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಇಂದು ಎರಡನೇ ಟಿ-20 ಪಂದ್ಯವನ್ನು ತಿರುವನಂತಪುರಂ ಮೈದಾನದಲ್ಲಿ ಆಡಲಿದೆ.

ವಿಶೇಷ ಎಂದರೆ ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವದ ನಂಬರ್ 1 ತಂಡವಾಗಲಿದೆ.

ಈ ಪಂದ್ಯವನ್ನು ಗೆಲ್ಲುವ ಮೂಲಕ ಒಂದು ವಿಷಯದಲ್ಲಿ ವಿಶ್ವದ ನಂಬರ್ 1 ತಂಡವಾಗಲಿದೆ. ಪಾಕಿಸ್ತಾನ ಇದುವರೆಗೆ ಗರಿಷ್ಠ 135 ಟಿ20 ಪಂದ್ಯಗಳನ್ನು ಗೆದ್ದಿದೆ.

ಕಳೆದ ಪಂದ್ಯವನ್ನು ಗೆದ್ದು ಭಾರತ 134 ತಲುಪಿದೆ. ಒಂದು ವೇಳೆ ಟೀಂ ಇಂಡಿಯಾ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ಪಾಕಿಸ್ತಾನದೊಂದಿಗೆ ಜಂಟಿಯಾಗಿ ಮೊದಲ ಸ್ಥಾನ ಹಂಚಿಕೊಳ್ಳಲಿದೆ.

ಟಿ20ಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡ

  • ಪಾಕಿಸ್ತಾನ – 135 ಗೆಲುವುಗಳು
  • ಭಾರತ – 134 ಗೆಲುವುಗಳು
  • ನ್ಯೂಜಿಲೆಂಡ್ – 102 ಗೆಲುವುಗಳು
  • ದಕ್ಷಿಣ ಆಫ್ರಿಕಾ – 95 ಗೆಲುವುಗಳು
  • ಆಸ್ಟ್ರೇಲಿಯಾ – 94 ಗೆಲುವುಗಳು