Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಕ್ರಿಕೆಟ್: ಇಂಗ್ಲೆಂಡ್ ಏಕದಿನ, ಟಿ20 ತಂಡಕ್ಕೆ ಜೋಸ್ ಬಟ್ಲರ್ ಕ್ಯಾಪ್ಟನ್

ಕ್ರಿಕೆಟ್: ಇಂಗ್ಲೆಂಡ್ ಏಕದಿನ, ಟಿ20 ತಂಡಕ್ಕೆ ಜೋಸ್ ಬಟ್ಲರ್ ಕ್ಯಾಪ್ಟನ್

ಬೆಂಗಳೂರು, ಜುಲೈ 01, 2022 (www.justkannada.in): ಇಂಗ್ಲೆಂಡ್ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ತಂಡದ ನಾಯಕತ್ವವನ್ನು ಜೋಸ್ ಬಟ್ಲರ್ ವಹಿಸಿಕೊಳ್ಳಲಿದ್ದಾರೆ.

ಇಯಾನ್ ಮಾರ್ಗನ್ ಸುಮಾರು ಏಳೂವರೆ ವರ್ಷಗಳ ಕಾಲ ತಂಡದ ನಾಯಕರಾಗಿದ್ದರು. ಆ ಸಮಯದಲ್ಲಿ ಬಟ್ಲರ್ ತಂಡದ ಉಪನಾಯಕನ ಜವಾಬ್ದಾರಿಯನ್ನು ಹೊತ್ತಿದ್ದರು.

ಇದೀಗ ಜೋಸ್ ಬಟ್ಲರ್ ತಂಡದ ನಾಯಕತ್ವ ಸಿಕ್ಕಿದೆ. ಅಂದಹಾಗೆ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಇಂಗ್ಲೆಂಡ್ ಪರ ಸೀಮಿತ ಓವರ್‌ಗಳಲ್ಲಿ ಜೋಸ್ ಬಟ್ಲರ್ ಅದ್ಭುತ ಬ್ಯಾಟಿಂಗ್ ಮಾಡಿದ್ದರು.

ಜೋಸ್ ಬಟ್ಲರ್ ಆಟದ ಪ್ರತಿಯೊಂದು ಸ್ವರೂಪದಲ್ಲಿ ಶತಕ ಗಳಿಸಿದ ಕೇವಲ ಮೂವರು ಇಂಗ್ಲೆಂಡ್ ಕ್ರಿಕೆಟಿಗರಲ್ಲಿ ಒಬ್ಬರು. ಇವರಲ್ಲದೆ ಡೇವಿಡ್ ಮಲಾನ್ ಮತ್ತು ಹೀದರ್ ನೈಟ್ ಈ ಸಾಧನೆ ಮಾಡಿದ್ದಾರೆ.