ಬೆಂಗಳೂರು, ಸೆಪ್ಟೆಂಬರ್ 28, 2022 (www.justkannada.in): ಭಾರತ-ಸೌತ್ ಆಫ್ರಿಕಾ ನಡುವಣ ಮೊದಲ ಟಿ-20 ಸರಣಿಯ ಪಂದ್ಯವು ತಿರುವನಂತಪುರಂದಲ್ಲಿನ ಗ್ರೀನ್ಫೀಲ್ಡ್ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆಯಲಿದೆ.
ಹೌದು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಪಂದ್ಯಕ್ಕೆ ಇದೀಗ ಮಳೆಯ ಭೀತಿ ಎದುರಾಗಿದೆ.
ಹವಾಮಾನ ವರದಿ ಪ್ರಕಾರ ತಿರುವನಂತಪುರಂದ ಸುತ್ತ ಮುತ್ತಲಿನಲ್ಲಿ ಮೋಡ ಕವಿದ ವಾತಾವಣರವಿದ್ದು, ಹೀಗಾಗಿ ಸಣ್ಣ ಪ್ರಯಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇದಾಗ್ಯೂ ಸೀಮಿತ ಓವರ್ಗಳಲ್ಲಿ ಪಂದ್ಯ ನಡೆಯುವುದು ಖಚಿತ.
ಮಳೆಯ ಸಾಧ್ಯತೆ ಹಗಲಿನಲ್ಲಿ 17% ಇದ್ದರೆ, ರಾತ್ರಿಯಲ್ಲಿ 21% ಇದೆ. ಹೀಗಾಗಿ ಮಳೆಯಾದರೂ ಸೀಮಿತ ಓವರ್ಗಳಲ್ಲಿ ಪಂದ್ಯವನ್ನು ಪೂರ್ಣಗೊಳಿಸಲು ಸಮಯವಕಾಶ ಇರಲಿದೆ.






