ಹಿಂದೂಸ್ತಾನ್ ಶಿಪ್ ಯಾರ್ಡ್ ನಲ್ಲಿ ಕ್ರೇನ್ ಕುಸಿದು 11 ಕಾರ್ಮಿಕರು ಸಾವು…

ವಿಶಾಖಪಟ್ಟಣಂ, ಆ,1,2020(www.justkannada.in):  ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆ ದುರಂತದ ಬಳಿಕ ಇದೀಗ ಮತ್ತೊಂದು ಘಟನೆ ಸಂಭವಿಸಿದೆ. ಇಲ್ಲಿನ ಹಿಂದೂಸ್ತಾನ್ ಶಿಪ್ ಯಾರ್ಡ್ ನಲ್ಲಿ ಕ್ರೇನ್ ಕುಸಿದು 11 ಕಾರ್ಮಿಕರು ಮೃತಪಟ್ಟಿದ್ದಾರೆ.jk-logo-justkannada-logo

ಹಿಂದೂಸ್ಥಾನ್ ಶಿಫ್ ಯಾರ್ಡ್ ನಲ್ಲಿ ಕಾಮಗಾರಿ ನಡೆಸುತ್ತಿರುವ ವೇಳೆಯಲ್ಲಿ, ಕುಸಿದು ಬಿದ್ದ ಪರಿಣಾಮ, ಕಾಮಗಾರಿಯಲ್ಲಿ ತೊಡಗಿದ್ದ 11 ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೇ, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಿನ ನಿತ್ಯದಂತೆಯೇ ಇಂದೂ ಕೂಡ ಶಿಪ್ ಯಾರ್ಡ್ ನಲ್ಲಿ ಲೋಡ್ ಅನ್ ಲೋಡ್ ಕಾರ್ಯ ನಡೆಯುತ್ತಿತ್ತು. ಈ ವೇಳೆ  ಇದ್ದಕಿದ್ದ ಹಾಗೆ ಕ್ರೇನ್ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ. ಪ್ರಸ್ತುತ ಕ್ರೇನ್ ಅವಶೇಷಗಳನ್ನು ತೆರವುಗೊಳಿಸಿ ಮೃತದೇಹಗಳನ್ನು ಹೊರ ತೆಗೆಯಲಾಗುತ್ತಿದೆ.crane-collapse-death-11-workers-hindustan-shipyard-vishakapatnam

ಇತ್ತೀಚೆಗಷ್ಟೇ ವಿಶಾಖಪಟ್ಟಣಂನಲ್ಲಿ ಎಲ್ ಜಿ ಪಾಲಿಮರ್ ಕಾರ್ಖಾನೆಯಲ್ಲಿ ಸಂಭವಿಸಿದ್ದ ವಿಷಾನಿಲ ಸೋರಿಕೆ ಮತ್ತು ಗ್ಯಾಸ್ ಟ್ಯಾಂಕ್ ಸ್ಫೋಟ ಪ್ರಕರಣಗಳಲ್ಲಿ  ಹಲವು ಮಂದಿ ತನ್ನ ಪ್ರಾಣ ಕಳೆದುಕೊಂಡಿದ್ದರು.

Key words: Crane- collapse –death- 11 workers – Hindustan Shipyard-vishakapatnam